alex Certify SHOCKING NEWS: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಹರಿದ ಚಿಕ್ಕಪ್ಪನ ಕಾರು; ಪುಟ್ಟ ಕಂದಮ್ಮ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಹರಿದ ಚಿಕ್ಕಪ್ಪನ ಕಾರು; ಪುಟ್ಟ ಕಂದಮ್ಮ ದುರ್ಮರಣ

ಕಾಸರಗೋಡು: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಚಿಕ್ಕಪ್ಪನ ಕಾರು ಹರಿದು ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡಿನ ಸೋಂಕಾಲ್ ಎಂಬಲ್ಲಿ ಈ ದುರಂತ ಸಂಭವಿಸಿದೆ. ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ದೊಡ್ದ ಮಗು ಸೈಕಲ್ ನ್ನು ಬದಿಗೆ ಇಡುತ್ತಿತ್ತು. ಈ ವೇಳೆ ಚಿಕ್ಕಪ್ಪನ ಕಾರು ಆಗಮಿಸಿದೆ. ಪುಟ್ಟ ಮಗು ಅಂಗಳದಲ್ಲಿ ಕಾರನ್ನು ನೋಡುತ್ತಾ ನಿಂತಿದೆ. ಕಾರು ನಿಲ್ಲಿಸುತ್ತಿದ್ದ ಚಿಕ್ಕಪ್ಪನಿಗೆ ಮಗು ನಿಂತಿದ್ದು ಕಾಣಿಸಿಲ್ಲ.

ಈ ವೇಳೆ ಕಾರಿನ ಮುಂದಿನ ಚಕ್ರಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ. ಮಗು ಕಾರಿನಡಿ ಸಿಲುಕುತ್ತಿದ್ದಂತೆ ದೊಡ್ಡ ಮಗು ಮಗುವನ್ನು ಎಳೆದು ಎತ್ತಿಕೊಂಡಿದೆ. ಆದರೆ ಅಷ್ಟರಲ್ಲೇ ಮಗು ಉಸಿರು ಚಲ್ಲಿದೆ.

ಮನೆಯ ಸಿಸಿ ಕ್ಯಾಮರಾದಲ್ಲಿ ಈ ಹೃದಯ ವಿದ್ರಾವಕ ದೃಶ್ಯ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...