alex Certify ಕಾರ್ತಿಕ ಮಾಸದಲ್ಲಿ ಮಾಡಬೇಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ ಮಾಸದಲ್ಲಿ ಮಾಡಬೇಡಿ ಈ ಕೆಲಸ

ಭಗವಂತ ವಿಷ್ಣು ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ತಿಂಗಳು ಕಾರ್ತಿಕ ಮಾಸ. ಕಾರ್ತಿಕ ಮಾಸ, ಅಕ್ಟೋಬರ್ 21ರಿಂದ ಶುರುವಾಗಲಿದ್ದು, ನವೆಂಬರ್ 19ರವರೆಗೆ ಇರಲಿದೆ. ನಿದ್ರೆಯಿಂದ ಏಳುವ ವಿಷ್ಣು, ಭಕ್ತರ ಭಕ್ತಿಯನ್ನು ಆನಂದಿಸುತ್ತಾನೆಂಬ ನಂಬಿಕೆಯಿದೆ. ಈ ತಿಂಗಳು ವಿಷ್ಣುವಿನ ಆರಾಧನೆ ಮಾಡಿದ್ರೆ, ಭಕ್ತರ ಆಸೆ ಈಡೇರುತ್ತದೆ ಎಂಬ ನಂಬಿಕೆಯಿದೆ.

ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು

ಕಾರ್ತಿಕ ಮಾಸದಲ್ಲಿ ಕೆಲಸವೊಂದು ಕೆಲಸಗಳನ್ನು ಮಾಡಬಾರದು. ಈ ತಿಂಗಳು ಪವಿತ್ರ ತಿಂಗಳಾದ ಕಾರಣ, ಮಾಂಸ, ಮದ್ಯದ ಸೇವನೆ ಮಾಡಬಾರದು. ಸ್ನಾನ ಮಾಡಿದ ನಂತ್ರ ದೇಹಕ್ಕೆ ಎಣ್ಣೆ ಹಚ್ಚುವ ರೂಢಿಯಿರುವವರು ಈ ತಿಂಗಳು ಅದನ್ನು ಮಾಡಬಾರದು. ಕೇವಲ ನರಕ ಚತುರ್ದಶಿಯಂದು ಮಾತ್ರ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಬಹಳ ಮುಖ್ಯ. ಈ ತಿಂಗಳಿನಲ್ಲಿ ಮಧ್ಯಾಹ್ನ ಮಲಗಬಾರದು.

ಈ ತಿಂಗಳು ಸೂರ್ಯನ ಕಿರಣಗಳಿಗೆ ದೇಹವೊಡ್ಡಬೇಕು. ನೆಲಕ್ಕೆ ಮಲಗಬೇಕು. ಭಗವಂತನ ಜಪ ಮಾಡಬೇಕು. ತಾಯಿ ಲಕ್ಷ್ಮಿ ಈ ತಿಂಗಳು ಭೂಮಿಗೆ ಬರ್ತಾಳೆ. ಹಾಗಾಗಿ ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮನೆ ಮುಂದೆ ರಂಗೋಲಿ ಹಾಕಬೇಕು. ಹಾಗೆ ಪ್ರತಿ ದಿನ ಸಂಜೆ ತುಳಸಿಗೆ ದೀಪ ಹಚ್ಚಬೇಕು. ತುಳಸಿ ಪೂಜೆಯನ್ನು ಮಾಡಬೇಕು. ಪ್ರತಿ ದಿನ ಸಂಜೆ ಮನೆಯಲ್ಲಿ ಧೂಪ, ದೀಪ ಬೆಳಗಿ ಪೂಜೆ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...