alex Certify ಕೆಜಿಎಫ್‌ 2 ರಿಲೀಸ್‌ ದಿನದಂದು ಸರ್ಕಾರಿ ರಜೆ ಘೋಷಿಸಲು ಪ್ರಧಾನಿ ಮೋದಿಗೆ ಯಶ್​ ಫ್ಯಾನ್ಸ್ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿಎಫ್‌ 2 ರಿಲೀಸ್‌ ದಿನದಂದು ಸರ್ಕಾರಿ ರಜೆ ಘೋಷಿಸಲು ಪ್ರಧಾನಿ ಮೋದಿಗೆ ಯಶ್​ ಫ್ಯಾನ್ಸ್ ಮನವಿ

ರಾಕಿಂಗ್​ ಸ್ಟಾರ್​ ಯಶ್​​ ಅಭಿನಯದ ಬಹು ನಿರೀಕ್ಷಿತ ಸಿನಿಮಾ‌ ಕೆಜಿಎಫ್‌ ಚಾಪ್ಟರ್‌ 2 ಮುಂಬರುವ ಜುಲೈ 16ರಂದು ತೆರೆಗಪ್ಪಳಿಸಲಿದೆ. ಯಶ್​ ಅಭಿಮಾನಿಗಳಂತೂ ಈ ಸಿನಿಮಾದ ರಿಲೀಸ್​ ದಿನಕ್ಕಾಗಿ ಕಾದು ಕುಳಿತಿದ್ದಾರೆ.

ಇದೀಗ ಯಶ್​ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಕೆಜಿಎಫ್​ 2 ಸಿನಿಮಾ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನ ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಯಶ್​ ಅಭಿಮಾನಿಗಳು ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಇದರಲ್ಲಿ ಯಶ್​ ಅಭಿಮಾನಿಗಳು ಕೆಜಿಎಫ್​ 2 ರಿಲೀಸ್​ ದಿನಾಂಕವಾದ 16/07/2021 ನ್ನು ಸರ್ಕಾರಿ ರಜೆಯನ್ನಾಗಿ ಘೋಷಿಸಿ ಎಂದು ಮನವಿ ಮಾಡಿದ್ದಾರೆ.

ನಮ್ಮ ಭಾವನೆಯನ್ನ ಅರ್ಥ ಮಾಡಿಕೊಳ್ಳಿ. ಕೆಜಿಎಫ್​ 2 ಅನ್ನೋದು ನಮಗೆ ಕೇವಲ ಸಿನಿಮಾ ಮಾತ್ರವಲ್ಲ. ಬದಲಾಗಿ ಅದು ನಮ್ಮ ಭಾವನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...