alex Certify ಈ ಕಾರಣಕ್ಕೆ ಕೆಜಿಎಫ್-2 ವಿರುದ್ಧ ಶುರುವಾಗಿದೆ ಅಭಿಯಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಕೆಜಿಎಫ್-2 ವಿರುದ್ಧ ಶುರುವಾಗಿದೆ ಅಭಿಯಾನ…!

 

ಕೆಜಿಎಫ್ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಕೂಡ ಆರಂಭವಾಗಿದೆ. ಕೊರೊನಾ ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಸಿನಿಮಾ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಅಲ್ಲಿ ಸಿನಿಮಾ ತಂಡ ಬ್ಯುಸಿಯಾಗುತ್ತಿತ್ತು. ಆದರೆ ವಿಳಂಬವಾಗಿದೆ. ಇದೀಗ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಇದರ ಮಧ್ಯೆ ಅಭಿಮಾನಿಗಳು ಸಿಡಿದೇಳುವಂತಹ ಕೆಲಸಕ್ಕೆ ಸಿನಿಮಾ ತಂಡ ಕೈ ಹಾಕಿದೆ.

ಹೌದು, ಈ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಅವರ ಶೂಟಿಂಗ್ ಪೋರ್ಷನ್ ಕೂಡ ಆರಂಭವಾಗಿದೆ. ಪ್ರಕಾಶ್ ರೈ ಈ ಸಿನಿಮಾದಲ್ಲಿ ನಟಿಸೋದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಸಿನಿಮಾಗೆ ಸೇರಿಸಿಕೊಂಡಿದ್ದಕ್ಕೆ ಗರಂ ಆಗಿದ್ದಾರೆ.

ಇನ್ನು ಸಿನಿಮಾವನ್ನು ಬಾಯ್ಕಾಟ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಅಭಿಯಾನ ಕೂಡ ಆರಂಭವಾಗಿದೆ. ಅನಂತ್ ನಾಗ್ ಪಾತ್ರಕ್ಕೆ ಅವರನ್ನು ಸೇರಿಸಿಕೊಳ್ಳಬಾರದಿತ್ತು. ಇದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...