alex Certify ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಜಪ್ತಿಯಾಗಿದ್ದ ವಾಹನ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಜಪ್ತಿಯಾಗಿದ್ದ ವಾಹನ ವಾಪಸ್

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಇಂದಿನಿಂದ ವಾಪಸ್ ನೀಡಲಾಗುವುದು.

ವಾಹನಗಳ ಮಾಲೀಕರು ದಾಖಲೆ ಹಾಜರುಪಡಿಸಿ ದಂಡ ಕಟ್ಟಿ ತಮ್ಮ ವಾಹನಗಳನ್ನು ಪಡೆಯಬಹುದಾಗಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 500  ರೂಪಾಯಿ, 4 ಚಕ್ರದ ವಾಹನಗಳಿಗೆ 1000 ರೂಪಾಯಿ ದಂಡ ಹಾಕಲಾಗುವುದು. ವಾಹನಗಳ ಮಾಲೀಕರು ಆಯಾ ಶಾಲೆಗಳಿಗೆ ತೆರಳಿ ದಂಡ ಪಾವತಿಸಿ ವಾಹನ ವಿಮೆ, ಆರ್.ಸಿ. ಮತ್ತು ವಾಹನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಬೇಕು.

ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. ಹಂತಹಂತವಾಗಿ ವಾಹನಗಳನ್ನು ನೀಡಲಾಗುವುದು. ಎಲ್ಲ ವಾಹನಗಳನ್ನು ಒಮ್ಮೆಲೆ ನೀಡುವುದಿಲ್ಲ. ಮೊದಲು ವಶಕ್ಕೆ ಪಡೆದ ವಾಹನಗಳನ್ನು ಮೊದಲಿಗೆ ನೀಡಲಾಗುವುದು. ದಂಡ ಕಟ್ಟಲು ಯಾರೂ ಕೋರ್ಟ್ ಗೆ ಹೋಗಬೇಕಿಲ್ಲ. ಆಯಾ ಠಾಣೆಗಳಲ್ಲಿ ದಂಡ ಪಾವತಿಸಿ ವಾಹನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...