alex Certify ಹುಲಿಯಿಂದ ತಪ್ಪಿಸಿಕೊಳ್ಳಲು ಶ್ವಾನ ಮಾಡಿದ ಉಪಾಯ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಯಿಂದ ತಪ್ಪಿಸಿಕೊಳ್ಳಲು ಶ್ವಾನ ಮಾಡಿದ ಉಪಾಯ ವೈರಲ್

ತನ್ನನ್ನು ಬೇಟೆಯಾಡಲು ಬರುವ ಹುಲಿಯಿಂದ ತಪ್ಪಿಸಿಕೊಳ್ಳಲು ಕಾಡು ನಾಯಿಯೊಂದು ವಿಚಿತ್ರವಾಗಿ ಸದ್ದು ಮಾಡುತ್ತಾ, ಹುಲಿಯ ಯೋಜನೆ ತಲೆಕೆಳಗೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಬಿನಿ ಕಾಡಿನಲ್ಲಿ ಸಫಾರಿ ನಡೆಸುತ್ತಿದ್ದವರ ಕ್ಯಾಮರಾ ಕಣ್ಣಲ್ಲಿ ಈ ಘಟನೆ ಸೆರೆಯಾಗಿರುವುದು ವಿಶೇಷ.

ಕಾಡುದಾರಿಯಲ್ಲಿ ಏಕಾಏಕಿ ಹುಲಿಯು ನಾಯಿಯನ್ನು ಅಟ್ಟಿಸಿಕೊಂಡು ಕೆಲ ದೂರ ಓಡುತ್ತದೆ, ಆದರೆ ಅಂತರ ಕಾಯ್ದುಕೊಂಡ ನಾಯಿ ತಿರುಗಿ ನಿಂತು ವಿಚಿತ್ರವಾಗಿ ಕೂಗುತ್ತದೆ. ಹುಲಿ ಮಾತ್ರ ಬೇಟೆಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ ಪದೇಪದೇ ಯೋಚಿಸಿ ಹೆಜ್ಜೆ ಇಡುತ್ತದೆ. ನಾಯಿ ಕೂಡ ಅಂತರ ಕಾಯ್ದುಕೊಳ್ಳುತ್ತಲೇ ಕೂಗುವುದನ್ನು ಬಿಡುವುದಿಲ್ಲ.‌

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಈ ವಿಡಿಯೋವನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದು, ಈಗಾಗಲೇ ಇದು 15000 ವೀಕ್ಷಣೆಗಳನ್ನು 750ಕ್ಕೂ ಹೆಚ್ಚು ಲೈಕ್ ಪಡೆದಿದೆ.‌ ಹಲವು ನೆಟ್ಟಿಗರು ಆಶ್ಚರ್ಯಕರ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...