alex Certify BIG BREAKING: ಬೆಚ್ಚಿಬೀಳಿಸಿದ ಘಟನೆ, ಚಾಕುವಿನಿಂದ ಇರಿದು ತಹಶೀಲ್ದಾರ್ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬೆಚ್ಚಿಬೀಳಿಸಿದ ಘಟನೆ, ಚಾಕುವಿನಿಂದ ಇರಿದು ತಹಶೀಲ್ದಾರ್ ಕೊಲೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಕೊಲೆಯಾದವರು ಎಂದು ಹೇಳಲಾಗಿದೆ.

ಕಡವಂಚಿ ಗ್ರಾಮದ ವೆಂಕಟಾಚಲಪತಿ ಎಂಬುವರು ಚಾಕುವಿನಿಂದ ಇದಿದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಮೀನು ಸರ್ವೆ ಗೆ ಅರ್ಜಿ ಸಲ್ಲಿಸಲಾಗಿತ್ತು. ಜಮೀನು ಸರ್ವೆ ಗೆ ತಹಶೀಲ್ದಾರ್ ಹೋಗಿದ್ದ ಸಂದರ್ಭದಲ್ಲಿ ವೆಂಕಟಾಚಲಪತಿ ತಹಶೀಲ್ದಾರರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ತಹಶೀಲ್ದಾರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿವೃತ್ತ ಶಿಕ್ಷಕನಾಗಿರುವ ವೆಂಕಟಾಚಲಪತಿಯನ್ನು ಕಾಮಸಮುದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...