alex Certify ಆಂಬುಲೆನ್ಸ್ ಗೆ ಕಾಯುತ್ತಿದ್ದವರಿಗೆ ಶ್ರದ್ಧಾಂಜಲಿ ವಾಹನ, ಕೋವಿಡ್ ಆಸ್ಪತ್ರೆಯಲ್ಲಿ ಉಂಡವನೇ ಜಾಣ…! 1200 ರೂ. ಥರ್ಮಲ್ ಮೀಟರ್ ಗೆ 9 ಸಾವಿರ ರೂ. – ಲೆಕ್ಕಕೊಡಿ ಶ್ರೀರಾಮುಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಬುಲೆನ್ಸ್ ಗೆ ಕಾಯುತ್ತಿದ್ದವರಿಗೆ ಶ್ರದ್ಧಾಂಜಲಿ ವಾಹನ, ಕೋವಿಡ್ ಆಸ್ಪತ್ರೆಯಲ್ಲಿ ಉಂಡವನೇ ಜಾಣ…! 1200 ರೂ. ಥರ್ಮಲ್ ಮೀಟರ್ ಗೆ 9 ಸಾವಿರ ರೂ. – ಲೆಕ್ಕಕೊಡಿ ಶ್ರೀರಾಮುಲು

500 ರೂಪಾಯಿ ಮೌಲ್ಯದ ಸ್ಯಾನಿಟೈಸರ್ ಗೆ 900 ರೂಪಾಯಿ ಕೊಟ್ಟು ಖರೀದಿಸಲಾಗಿದೆ. 1200 ರೂ. ಬೆಲೆಯ ಥರ್ಮಲ್ ಮೀಟರ್ ಗೆ 9 ಸಾವಿರ ರೂ. ಕೊಟ್ಟು ಖರೀದಿ ಮಾಡಲಾಗಿದೆ. ಇದೇನಾ ನಿಮ್ಮ ಸರ್ಕಾರದ ಕೆಲಸ ಶ್ರೀರಾಮುಲು ಅವರೇ ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.

ಶ್ರೀರಾಮುಲು ಅವರೇ ಕೆಲಸ ಮಾಡಲು ಬಿಡಿ ಎನ್ನುವ ನೀವು ಮೊದಲು ಲೆಕ್ಕ ಕೊಡಿ ಎಂದು ಖಾದರ್ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರ ಕೊಡಿ. ಮೂರು ತಿಂಗಳಾದರೂ ಹಾಸಿಗೆ ಸಿದ್ಧವಿಲ್ಲ. ಆಂಬುಲೆನ್ಸ್ ಬರುತ್ತಿಲ್ಲ, ಸರ್ಕಾರದ ವೇಗ ನೋಡಿದರೆ ಆಂಬುಲೆನ್ಸ್ ಗೆ ಕಾಯುತ್ತಿರುವವರಿಗೆ ಶ್ರದ್ಧಾಂಜಲಿ ವಾಹನ ಕಳುಹಿಸಿಕೊಡುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಉಂಡವನೇ ಜಾಣ ಎಂಬಂತಿದೆ ನಿಮ್ಮ ಸರ್ಕಾರದ ನಿಲುವು. ಕೆಲಸ ಮಾಡಲು ಬಿಡಿ ಎನ್ನುವ ನೀವು ಮೊದಲು ಲೆಕ್ಕ ಕೊಡಿ ಎಂದು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...