alex Certify ಎಲ್ಲೆಲ್ಲೂ ಮದ್ಯದಂಗಡಿ ಓಪನ್ ಬಗ್ಗೆಯೇ ಭಾರೀ ಚರ್ಚೆ: ಫುಲ್ ಟೈಟ್ ಆಗಲು ಕಾಯುತ್ತಿದ್ದವರಿಗೆ ಶಾಕ್, ಕೇಳಿದಷ್ಟು ಸಿಗಲ್ಲ ಮದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೆಲ್ಲೂ ಮದ್ಯದಂಗಡಿ ಓಪನ್ ಬಗ್ಗೆಯೇ ಭಾರೀ ಚರ್ಚೆ: ಫುಲ್ ಟೈಟ್ ಆಗಲು ಕಾಯುತ್ತಿದ್ದವರಿಗೆ ಶಾಕ್, ಕೇಳಿದಷ್ಟು ಸಿಗಲ್ಲ ಮದ್ಯ

ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು ಮೇ 4 ರಂದು ಬೆಳಗ್ಗೆ 9 ಗಂಟೆಯಿಂದ ಮದ್ಯದಂಗಡಿ ಬಾಗಿಲು ಓಪನ್ ಆಗಲಿವೆ.

ಸದ್ಯಕ್ಕಂತೂ ಕೊರೋನಾ ವೈರಸ್, ಲಾಕ್ಡೌನ್ ಗಿಂತಲೂ ಮದ್ಯದಂಗಡಿ ಓಪನ್ ಆಗುತ್ತಿರುವುದೇ ಸೆನ್ಸೇಷನ್ ಸುದ್ದಿಯಾಗಿದೆ. ಎಲ್ಲೆಲ್ಲಿಯೂ ಮದ್ಯದ ಅಂಗಡಿ ಓಪನ್ ಆಗುತ್ತಿರುವ ಬಗ್ಗೆಯೇ ಭಾರಿ ಚರ್ಚೆ ನಡೆದಿದೆ. ಮದ್ಯ ಮಾರಾಟದ ಅಂಗಡಿಗಳಲ್ಲಿ ನಿಯಮಾನುಸಾರ ಮಾರಾಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಅಂದ ಹಾಗೆ, ನಾಳೆಯಿಂದ ಎಣ್ಣೆ ಸಿಗುತ್ತೆ ಫುಲ್ ಟೈಟ್ ಆಗಬಹುದು ಎಂದುಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮದ್ಯದಂಗಡಿ ಮಾಲೀಕರ ಜೊತೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೋಲೀಸರು ಸಭೆ ನಡೆಸಿದ್ದು ಹಲವು ಮಾರ್ಗಸೂಚಿಗಳನ್ನು ನಿಗದಿ ಮಾಡಿದ್ದಾರೆ.

ಒಬ್ಬರಿಗೆ 6 ಕ್ವಾರ್ಟರ್ ಅಥವಾ 90ml ನ 10 ಪೌಚ್ ಅಥವಾ ಒಂದು ಫುಲ್ ಬಾಟಲ್ ಮತ್ತು ಒಂದು ಅರ್ಧ ಬಾಟಲ್ ಮಾರಾಟ ಮಾಡಬಹುದು. ಬಿಯರ್ ಆದರೆ 4 ಫುಲ್ ಬಾಟಲ್ ಬಿಯರ್ ಅಥವಾ 6 ಪಿಂಟ್ ಮಾರಾಟ ಮಾಡಬಹುದು. ನಿಗದಿಗಿಂತ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟಕ್ಕೆ ನಿಷೇಧ ಇದೆ.

ಕೌಂಟರ್ ನಲ್ಲಿ ಮಾತ್ರ ಮಾರಾಟ ಮಾಡಬೇಕು. ಬೇರೆ ಕಡೆಗೆ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ವೈಯಕ್ತಿಕ ಅಂತರ, ಮಾಸ್ಕ್ ಧರಿಸುವುದು ಸೇರಿ ನಿಗದಿಪಡಿಸಲಾದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಿಲ್ಟ್ರಿ ಹೋಟೆಲ್, ಡಾಬಾಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...