alex Certify ಗುಡ್ ನ್ಯೂಸ್: 5 ಸಾವಿರಕ್ಕೂ ಅಧಿಕ ಪೊಲೀಸ್ ನೇಮಕಾತಿ, ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: 5 ಸಾವಿರಕ್ಕೂ ಅಧಿಕ ಪೊಲೀಸ್ ನೇಮಕಾತಿ, ಇಲ್ಲಿದೆ ಮಾಹಿತಿ

ಧಾರವಾಡ: 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು.

ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕಗಳನ್ನು ವಿಸ್ತರಿಸಲಾಗಿದೆ. ವಯೋಮಿತಿ ಸೇರಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಸಿ.ಪಿ.ಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ -558, ಎ.ಪಿ.ಸಿ.(ಪುರುಷ)(ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ-444, ಅರ್ಜಿ ಸಲ್ಲಿಸಲು ಜುಲೈ 09 ಕೊನೆಯ ದಿನಾಂಕ, ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನಾಂಕ.

ಸಿ.ಪಿ.ಸಿ(ಪುರುಷ ಮತ್ತು ಮಹಿಳಾ),ಹುದ್ದೆಗಳ ಸಂಖ್ಯೆ-2007, ಎ.ಪಿ.ಸಿ.(ಪುರುಷ) (ಸಿಎಆರ್/ಡಿಎಆರ್), ಹುದ್ದೆಗಳ ಸಂಖ್ಯೆ-1005, ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕ, ಶುಲ್ಕ ಪಾವತಿಸಲು ಜುಲೈ 15 ಕೊನೆಯ ದಿನಾಂಕ.

ಸ್ಪೇಷಲ್ ಆರ್.ಪಿ.ಸಿ.(ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ), ಹುದ್ದೆಗಳ ಸಂಖ್ಯೆ- 2420 ಹಾಗೂ ಸ್ಪೇಷಲ್ ಆರ್.ಪಿ.ಸಿ.(ಪುರುಷ) (ಬ್ಯಾಂಡ್ಸ್‍ಮನ್) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ) ಹುದ್ದೆಗಳ ಸಂಖ್ಯೆ-252 ಅರ್ಜಿ ಸಲ್ಲಿಸಲು ಜುಲೈ 6 ಕೊನೆಯ ದಿನಾಂಕವಾಗಿದೆ, ಶುಲ್ಕ ಪಾವತಿಸಲು ಜುಲೈ 8 ಕೊನೆಯ ದಿನಾಂಕವಾಗಿದೆ ಎಂದು ಧಾರವಾಡ ಜಿಲ್ಲಾ  ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...