alex Certify ವಿಡಿಯೋ ವೀಕ್ಷಿಸಿದಾಗ ‘ಅಸಲಿ’ ಅಭ್ಯರ್ಥಿ ಬಣ್ಣ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ವೀಕ್ಷಿಸಿದಾಗ ‘ಅಸಲಿ’ ಅಭ್ಯರ್ಥಿ ಬಣ್ಣ ಬಯಲು

ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದ ‘ಅಸಲಿ’ ಅಭ್ಯರ್ಥಿಯೊಬ್ಬನ ‘ನಕಲಿ’ ಬಣ್ಣ ವಿಡಿಯೋ ವೀಕ್ಷಣೆ ವೇಳೆ ಬಹಿರಂಗವಾಗಿದೆ. ಇಂಥದ್ದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪೊಲೀಸ್ ನೇಮಕಾತಿಯಲ್ಲಿ ಗೋಕಾಕ ತಾಲೂಕು ಕಳ್ಳಿಗುದ್ದಿ ಗ್ರಾಮದ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ನೇಮಕಗೊಂಡಿದ್ದು ಈತ ಕರ್ತವ್ಯಕ್ಕೆ ಹಾಜರಾಗಲು ಬೆಳಗಾವಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಆಗಮಿಸಿದ್ದಾನೆ.

ಅನ್ನದಾತ ರೈತರಿಗೆ ಬಿಗ್ ಶಾಕಿಂಗ್ ನ್ಯೂಸ್: ಗೊಬ್ಬರ 300 ರೂ. ಹೆಚ್ಚಳ…?

ಈ ವೇಳೆ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಡಿಯೋ ವೀಕ್ಷಣೆ ಮಾಡಿದಾಗ ಅಸಲಿ ಅಭ್ಯರ್ಥಿ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ಬದಲಿಗೆ ಘಟಪ್ರಭಾದ ಮಾರುತಿ ಗಲ್ಲಿಯ ಸಚಿನ್ ಅಶೋಕ ಗುಗ್ಗರಿ ಹಾಜರಾಗಿರುವುದು ಬೆಳಕಿಗೆ ಬಂದಿದೆ.

ದೈಹಿಕ ಪರೀಕ್ಷೆಯಲ್ಲಿ ತಾನು ಅನುತ್ತೀರ್ಣನಾಗುವ ಭಯದಿಂದ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ತನ್ನ ಬದಲಿಗೆ ಅಶೋಕ ಗುಗ್ಗರಿಯನ್ನು ಕಳಿಸಿದ್ದನೆಂದು ಹೇಳಲಾಗಿದೆ. ಇದೀಗ ವಿಡಿಯೋ ಮೂಲಕ ಇಬ್ಬರ ಬಣ್ಣ ಬಯಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...