alex Certify ಪ್ರಮಾಣ ಪತ್ರ ಪಡೆಯುವವರಿಗೆ ಇಲ್ಲಿದೆ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮಾಣ ಪತ್ರ ಪಡೆಯುವವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ದಾವಣಗೆರೆ: ಕೋವಿಡ್ 19 ಹಿನ್ನೆಲೆ ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ 2004 ರಿಂದ ತಹಲ್‍ವರೆಗೆ ಋಣಭಾರ ಪ್ರಮಾಣ ಪತ್ರ (Encumberance certificate)  ಹಾಗೂ ದಸ್ತಾವೇಜಿನ ದೃಢೀಕೃತ ನಕಲು ಪ್ರತಿ (Certified copy of document)  ಗಳನ್ನು ಆನ್‍ಲೈನ್ ವೆಬ್‍ಸೈಟ್ http://kaverionline .karnataka.gov.in ಮುಖಾಂತರವೇ ಕಡ್ಡಾಯವಾಗಿ ಪಡೆಯಲು ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರು ಸೂಚಿಸಿರುತ್ತಾರೆ.

ಇದರನ್ವಯ ಆನ್‍ಲೈನ್‍ನಲ್ಲಿ ಋಣಭಾರ ಪ್ರಮಾಣ ಪತ್ರ ಮತ್ತು ದಸ್ತಾವೇಜಿನ ದೃಢೀಕೃತ ನಕಲು ಪ್ರತಿ ಪಡೆಯಲು ಸಮಸ್ಯೆಗಳು ಉಂಟಾದಲ್ಲಿ ಪರಿಹರಿಸಲು ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಕೇಂದ್ರ ಕಚೇರಿಯ ಗಣಕೀಕರಣ ಶಾಖೆಯಲ್ಲಿ ತಾತ್ಕಾಲಿಕವಾಗಿ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ದಾವಣಗೆರೆ ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಆನ್‍ಲೈನ್‍ನಲ್ಲಿ ಋಣಭಾರ ಪತ್ರ ಮತ್ತು ದಸ್ತಾವೇಜು ದೃಢೀಕೃತ ನಕಲು ಪ್ರತಿ ಪಡೆಯಲು ಏನಾದರೂ ಸಮಸ್ಯೆಗಳು ಉಂಟಾದಲ್ಲಿ ಈ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 7019917044 ನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದೆಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...