alex Certify ಬಿಗ್ ನ್ಯೂಸ್: 7ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: 7ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ಇಲ್ಲ

ಬೆಂಗಳೂರು: ಎಲ್ಕೆಜಿಯಿಂದ 5ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ನಿರ್ಬಂಧಿಸಲಾಗಿದ್ದು, ಅದನ್ನು 7ನೇ ತರಗತಿಯವರೆಗೆ ವಿಸ್ತರಿಸಲು ಸಿಎಂ ಯಡಿಯೂರಪ್ಪ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಶೈಕ್ಷಣಿಕ ಸಲಹೆಗಾರ ಡಾ.ಎಂ.ಆರ್. ದೊರೆಸ್ವಾಮಿ ಹೇಳಿದ್ದಾರೆ.

5 ನೇ ತರಗತಿಯವರೆಗೆ ಆನ್ಲೈನ್ ತರಗತಿಗಳನ್ನು ರದ್ದು ಮಾಡಲಾಗಿದೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಸಭೆ ನಡೆಸಿ 7ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ರದ್ದು ಮಾಡುವಂತೆ ಸೂಚನೆ ನೀಡಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ 7ನೇ ತರಗತಿಯವರೆಗೆ ಆನ್ಲೈನ್ ತರಗತಿಗಳನ್ನು ರದ್ದು ಮಾಡುವಂತೆ ಸಲಹೆ ಕೇಳಿಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...