alex Certify ಪ್ರವಾಸಿಗರಿಗೆ ಸಿಹಿ ಸುದ್ದಿ: ಮೈಸೂರು ಮೃಗಾಲಯ ಪುನಾರಂಭ, ಅರಮನೆಗೆ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಸಿಹಿ ಸುದ್ದಿ: ಮೈಸೂರು ಮೃಗಾಲಯ ಪುನಾರಂಭ, ಅರಮನೆಗೆ ಪ್ರವೇಶ

ಮೈಸೂರು: ಇಂದು ಮೈಸೂರು ಮೃಗಾಲಯ ಪುನಾರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.. ಸೋಮಶೇಖರ್, ಮಂಡ್ಯ ಸಂಸದರಾದ ಸುಮಲತಾ ಅಂಬರೀಷ್ ಭಾಗಿಯಾಗಲಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿಂದ ಬಂದ್ ಆಗಿದ್ದ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯವು ಸೋಮವಾರ (ಜೂ.8)ರಂದು ಪುನಾರಂಭಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ಮೃಗಾಲಯವು ಪುನಾರಂಭಗೊಳ್ಳಲಿದ್ದು, ಪ್ರಾಣಿಗಳ ಆಹಾರಕ್ಕೆ ಈವರೆಗೆ 3 ಕೋಟಿ ರೂಪಾಯಿ 4 ಲಕ್ಷ ರೂ ಗಳನ್ನು ದಾನಿಗಳ ನೆರವಿನಿಂದ ಸಂಗ್ರಹ ಮಾಡಲಾಗಿದೆ.

ಅದೇ ರೀತಿ, ಇಂದಿನಿಂದ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ಕಾರಣದಿಂದ ಪ್ರವೇಶ ನಿಷೇಧಿಸಲಾಗಿತ್ತು. ಅರಮನೆ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ 3500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...