alex Certify ಶಾಸಕರ ಖಾತೆ ಹ್ಯಾಕ್ ಮಾಡಿ ಹಣ ವಸೂಲಿಗೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕರ ಖಾತೆ ಹ್ಯಾಕ್ ಮಾಡಿ ಹಣ ವಸೂಲಿಗೆ ಯತ್ನ

ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ವಸೂಲಿಗೆ ಯತ್ನಿಸಿದ ಘಟನೆ ನಡೆದಿದೆ. ಸೈಬರ್ ಕ್ರೈಂ ಪೊಲೀಸರಿಗೆ ಶಾಸಕರು ಈ ಕುರಿತಾಗಿ ಮಾಹಿತಿ ನೀಡಿದ್ದು ರಾಜಸ್ಥಾನದಲ್ಲಿರುವ ಮೊಬೈಲ್ ಸಂಖ್ಯೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.

ಶಾಸಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ತುರ್ತಾಗಿ ಹಣ ಜಮಾ ಮಾಡಿ ಎಂದು ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಯನ್ನು ಫೇಸ್ಬುಕ್ನಲ್ಲಿ ಹಾಕಲಾಗಿದೆ.

ಶಾಸಕ ಪರಣ್ಣ ಮನವಳ್ಳಿ ಅವರ ಫೋಟೋ ಕೂಡ ಪೋಸ್ಟ್ ಮಾಡಲಾಗಿದ್ದು, ಅವರೇ ಮನವಿ ಮಾಡಿದಂತೆ ಸಂದೇಶಗಳನ್ನು ಕಳುಹಿಸಲಾಗಿದೆ. ಶಾಸಕರ ಬೆಂಬಲಿಗರು ಈ ಕುರಿತು ಅವರ ಗಮನಕ್ಕೆ ತಂದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...