alex Certify ಬಿಗ್ ನ್ಯೂಸ್: ಡಿಕೆಶಿ ಪುತ್ರಿ ಐಶ್ವರ್ಯಾ, ಎಸ್ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮದುವೆಗೆ ದಿನಾಂಕ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಡಿಕೆಶಿ ಪುತ್ರಿ ಐಶ್ವರ್ಯಾ, ಎಸ್ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮದುವೆಗೆ ದಿನಾಂಕ ನಿಗದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿ. ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ಮದುವೆಗೆ ದಿನಾಂಕ ನಿಗದಿಯಾಗಿದೆ.

2021ರ ಫೆಬ್ರವರಿ 14 ಇಲ್ಲವೇ 24 ರಂದು ಐಶ್ವರ್ಯಾ ಮತ್ತು ಅಮರ್ತ್ಯ ಹೆಗಡೆ ಅವರ ಮದುವೆ ನೆರವೇರಿಸಲು ಎರಡು ಕುಟುಂಬದವರು ದಿನಾಂಕ ನಿಶ್ಚಯ ಮಾಡಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 14 ಅಥವಾ 24 ರ ದಿನಾಂಕ ಮುವೆಗೆ ಗೊತ್ತು ಮಾಡಲಾಗಿದೆ. ಏಪ್ರಿಲ್ 15 ರಂದು ಅಮಾರ್ತ್ಯ ಹೆಗಡೆ ಮತ್ತು ಐಶ್ವರ್ಯಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಅರಮನೆ ಮೈದಾನದಲ್ಲಿ ಮದುವೆ ನೆರವೇರಿಸಲು ಪ್ಲಾನ್ ಮಾಡಿಕೊಳ್ಳಲಾಗಿದ್ದು ಕೊರೋನಾ ಪರಿಸ್ಥಿತಿ ಆಧರಿಸಿ ಸ್ಥಳ ನಿಗದಿ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...