alex Certify ಮಗ್ಗುಲ ಮುಳ್ಳಾದ ಮಹಾರಾಷ್ಟ್ರ, ರಾಜ್ಯದಲ್ಲಿ ಕೊರೋನಾ ಸ್ಪೋಟ: ಒಂದೇ ದಿನ ದಾಖಲೆಯ 99 ಮಂದಿಗೆ ಸೋಂಕು ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ್ಗುಲ ಮುಳ್ಳಾದ ಮಹಾರಾಷ್ಟ್ರ, ರಾಜ್ಯದಲ್ಲಿ ಕೊರೋನಾ ಸ್ಪೋಟ: ಒಂದೇ ದಿನ ದಾಖಲೆಯ 99 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 99 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1246 ಏರಿಕೆಯಾಗಿದೆ.

ಬೆಳಗ್ಗೆ 84 ಪ್ರಕರಣ ಪತ್ತೆಯಾಗಿದ್ದು ಸಂಜೆ ವೇಳೆಗೆ 15 ಕೇಸ್ ಪತ್ತೆಯಾಗಿವೆ. ಸಂಜೆ ಬೆಂಗಳೂರಿನಲ್ಲಿ 6, ಕಲಬುರ್ಗಿಯಲ್ಲಿ 5, ದಕ್ಷಿಣಕನ್ನಡದಲ್ಲಿ 2, ಉತ್ತರ ಕನ್ನಡದಲ್ಲಿ 1, ಉಡುಪಿಯಲ್ಲಿ 1 ಪಾಸಿಟಿವ್ ಕೇಸ್ ಪತ್ತೆಯಾಗಿವೆ.

ಇವತ್ತು ಬೆಂಗಳೂರು 24, ಮಂಡ್ಯ 17, ಕಲಬುರ್ಗಿ 10, ಉತ್ತರ ಕನ್ನಡ 9, ರಾಯಚೂರು 6, ಯಾದಗಿರಿ 5, ವಿಜಯಪುರ, ಗದಗ ತಲಾ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ದಕ್ಷಿಣ ಕನ್ನಡ 2, ದಾವಣಗೆರೆ 1, ಮೈಸೂರು, ಬೀದರ್, ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ 8 ವರ್ಷ ಮತ್ತು 11 ವರ್ಷದ ಬಾಲಕನಿಗೆ ಸೋಂಕು ತಗಲಿದೆ. ಕಲಬುರ್ಗಿಯಲ್ಲಿ ಪುಟಾಣಿಗಳಿಗೆ ಸೋಂಕು ತಗುಲಿದೆ. ರಾಜ್ಯಕ್ಕೆ ಮಹಾರಾಷ್ಟ್ರ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತಿದೆ. ಮಹಾರಾಷ್ಟ್ರದಿಂದ ಸಂಪರ್ಕಿತರಲ್ಲಿ ಹೆಚ್ಚಿನವರಿಗೆ ಕೊರೋನಾ ಇರುವುದು ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...