alex Certify ಮೆಡಿಕಲ್​ ಕಾಲೇಜಿಗೆ ಸೇರಿದ ಕಟ್ಟಡಕ್ಕೆ ನುಗ್ಗಿದ ಕಪ್ಪು ಚಿರತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಡಿಕಲ್​ ಕಾಲೇಜಿಗೆ ಸೇರಿದ ಕಟ್ಟಡಕ್ಕೆ ನುಗ್ಗಿದ ಕಪ್ಪು ಚಿರತೆ…!

Leopard Strays Into Medical College In Karnataka. Watchಮೆಡಿಕಲ್​ ಕಾಲೇಜಿನ ಕಾರಿಡಾರ್​​ನಲ್ಲಿ ಚಿರತೆಯೊಂದು ಓಡಾಡಿದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಮರಾಜನಗರ ಮೆಡಿಕಲ್​ ಕಾಲೇಜ್ ಕ್ಯಾಂಪಸ್​ನಲ್ಲಿ ಈ ಘಟನೆ ನಡೆದಿದೆ.

ಟ್ವಿಟರ್​ನಲ್ಲಿ ಐಎಫ್​​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಈ ಪ್ರಾಣಿಯನ್ನ ಪರ್ವೀನ್​​ ಕಪ್ಪು ಚಿರತೆ ಎಂದು ಗುರುತಿಸಿದ್ದಾರೆ. ಕಪ್ಪು ಚಿರತೆ ಕಾಲೇಜನ್ನ ಪರಿಶೀಲನೆ ನಡೆಸುತ್ತಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ .

ಈ ಸಿಸಿ ಟಿವಿ ಫೂಟೇಜ್​ನಲ್ಲಿ ಚಿರತೆ ಮೆಡಿಕಲ್​ ಕಾಲೇಜಿಗೆ ಸೇರಿದ ಕಟ್ಟಡದಲ್ಲಿ ಓಡಾಡುತ್ತಿರೋದನ್ನ ಗಮನಿಸಬಹುದಾಗಿದೆ. ಬಂದ ದ್ವಾರದಿಂದಲೇ ವಾಪಸ್ಸಾಗಲು ಚಿರತೆ ಪರಿಶೀಲನೆ ನಡೆಸುತ್ತಿರೋದನ್ನೂ ಕಾಣಬಹುದಾಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ವೈರಲ್ ಆಗಿದೆ. ಕಮೆಂಟ್ನಲ್ಲಿ ಒಬ್ಬರು ಭಗೀರಾ ಕಾಲೇಜಿನಲ್ಲಿ ದಾಖಲಾತಿ ಹೊಂದಲು ಬಂದಿರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

— Parveen Kaswan, IFS (@ParveenKaswan) January 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...