ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಪ್ರಾಣಬಿಟ್ಟ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿರುವ ಬೆನ್ನಲ್ಲೇ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಇಂತಹದ್ದೊಂದು ಅನಾಹುತ ಶಾಸಕರ ಸಮಯಪ್ರಜ್ಞೆಯಿಂದ ತಪ್ಪಿದೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಲು ಇನ್ನೇನು ಕೇವಲ 2 ಗಂಟೆ ಮಾತ್ರ ಬಾಕಿ ಉಳಿದಿದೆ ಎನ್ನುವಾಗ ವೈದ್ಯಾಧಿಕಾರಿ ಡಾ. ಚಂದ್ರಪ್ಪ ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಧಾವಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ವೈದ್ಯಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು.
ಸುಧಾಕರ್ ಅಯೋಗ್ಯ ಮಂತ್ರಿ: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಆಸ್ಪತ್ರೆಯಲ್ಲಿ 40 ಮಂದಿ ಸೋಂಕಿತರು ಆಕ್ಸಿಜನ್ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜಿನ ಬಗ್ಗೆ ಮೊದಲೇ ಕಾಳಜಿ ವಹಿಸಬೇಕು. ಈ ರೀತಿ ಕೊನೆ ಘಳಿಗೆಯಲ್ಲಿ ತಿಳಿಸಿದ್ರೆ ಏನು ಮಾಡೋದು ಅಂತಾ ವೈದ್ಯಾಧಿಕಾರಿಗೆ ಕ್ಲಾಸ್ ತೆಗೆದುಕೊಂಡ್ರು.
ಬಳಿಕ ಶಾಸಕ ರೇಣುಕಾಚಾರ್ಯ ಪರಿಸ್ಥಿತಿಯ ವಿವರಣೆ ನೀಡುವ ಮೂಲಕ ಜಗಳೂರಿಗೆ ತೆರಳುತ್ತಿದ್ದ ಸಿಲಿಂಡರ್ಗಳನ್ನ ಪೊಲೀಸ್ ಎಸ್ಕಾರ್ಟ್ ಮೂಲಕ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ತರಿಸಿಕೊಂಡು 40 ಮಂದಿ ಸೋಂಕಿತರ ಪ್ರಾಣ ಉಳಿಸಿದ್ರು.
https://www.youtube.com/watch?v=s4gqwnDbKUo
https://www.youtube.com/watch?v=Zo42zMhTaCA