alex Certify ಮೊಬೈಲ್​ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಬೇಕು ಅಂದರೆ ಈ ವಿಧಾನ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಬೇಕು ಅಂದರೆ ಈ ವಿಧಾನ ಅನುಸರಿಸಿ

ಸ್ಮಾರ್ಟ್​ ಫೋನ್​ಗಳು ಇಲ್ಲದೇ ಬದುಕೇ ಇಲ್ಲ ಎಂಬಷ್ಟರಮಟ್ಟಿಗೆ ನಾವುಗಳು ಮೊಬೈಲ್​ಗೆ ಅವಲಂಬಿತರಾಗಿದ್ದೇವೆ. ನೀವು ಕೂಡ ಮೊಬೈಲ್​​ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡ್ತಿರೋ ಅನ್ನೋದಾದ್ರೆ ನಿಮ್ಮ ಮೊಬೈಲ್​ ಬಹಳ ವರ್ಷಗಳ ಕಾಲ ಬಾಳಿಕೆ ಬರಬೇಕು ಅಂದರೆ ನೀವು ಕೆಲವೊಂದಿಷ್ಟು ನಿಯಮಗಳನ್ನ ಅನುಸರಿಸಬೇಕಾಗುತ್ತೆ.
ಸ್ಮಾರ್ಟ್ ಫೋನ್ ಗಳು ಬ್ಯಾಟರಿ ಹಾಳಾಯ್ತು ಅಂದರೆ ಆ ಫೋನ್​ನ ಕತೆ ಮುಗೀತು ಅಂತಾನೇ ಅರ್ಥ. ಹೀಗಾಗಿ ಮೊಬೈಲ್​ ಬ್ಯಾಟರಿಗಳ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಳ್ಳೋದು ಅತಗತ್ಯ.  ನೀವು ಮೊಬೈಲ್​ನ್ನ ಹೇಗೆ ಚಾರ್ಜ್​ ಮಾಡ್ತೀರಾ ಅನ್ನೋದರ ಮೇಲೆ ಮೊಬೈಲ್​ ಬ್ಯಾಟರಿಯ ಕ್ಷಮತೆ ಬಾಳಿಕೆಗೆ ಬರುತ್ತೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮೊಬೈಲ್​ನ್ನ ಚಾರ್ಜ್​ ಮಾಡ್ತಾರೆ. ಇದರಲ್ಲಿ ಕೆಲವೊಂದು ಅಭ್ಯಾಸಗಳು ಮೊಬೈಲ್​ ಬ್ಯಾಟರಿಯನ್ನೇ ಹಾಳುಮಾಡಬಲ್ಲವು. ಹೀಗಾಗಿ ಮೊಬೈಲ್​ ಚಾರ್ಜ್​ ಮಾಡುವ ಸರಿಯಾದ ರೀತಿ ಹೇಗೆ ಅನ್ನೋದನ್ನ ತಿಳಿದುಕೊಳ್ಳೋದು ಅನಿವಾರ್ಯ. ಹೀಗಾಗಿ ಮೊಬೈಲ್​ಗಳನ್ನ ಸರಿಯಾದ ವಿಧಾನದಲ್ಲಿ ಚಾರ್ಜ್​ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ.
ಬಹುತೇಕ ಮಂದಿ ಬೆಳಗ್ಗೆ ಪೂರ್ತಿ ಮೊಬೈಲ್​ ಬಳಕೆ ಮಾಡಿ ರಾತ್ರಿ ಪೂರ್ತಿ ಮೊಬೈಲ್​ನ್ನ ಚಾರ್ಜಿಂಗ್​​ನಲ್ಲಿ ಇಡ್ತಾರೆ. ಇದು ಬಹಳ ತಪ್ಪಾದ ವಿಧಾನವಾಗಿದೆ. ಮೊಬೈಲ್​ನಲ್ಲಿ ರಾತ್ರಿಪೂರ್ತಿ ಚಾರ್ಜಿಂಗ್​ನಲ್ಲಿ ಇಟ್ಟರೆ ಬ್ಯಾಟರಿ ಬಹುಬೇಗ ಹಾಳಾಗುತ್ತೆ. ಹೀಗಾಗಿ ನೀವು ಯಾವಾಗ ಎಚ್ಚರ ಇರ್ತೀರೋ ಆವಾಗಲೇ ಮೊಬೈಲ್​ ಚಾರ್ಜ್​ ಮಾಡಿ. ಎಂದಿಗೂ ಕೂಡ ಅವಶ್ಯಕತೆಗಿಂತ ಹೆಚ್ಚು ಸಮಯ ಮೊಬೈಲ್​ ಚಾರ್ಜಿಂಗ್​​ನಲ್ಲಿ ಇಡದಿರಿ.
ಬಹುತೇಕ ಮಂದಿ ಮೊಬೈಲ್​ನ್ನ 100 ಪರ್ಸೆಂಟ್​ ಚಾರ್ಜ್​ ಮಾಡಿಯೇ ಬಳಿಕ ಮೊಬೈಲ್​ ಬಳಕೆ ಮಾಡ್ತಾರೆ. ಆದರೆ ಈ ರೀತಿ ಮೊಬೈಲ್​ನ ಪ್ರತಿಬಾರಿ 100 ಪರ್ಸೆಂಟ್​ ಚಾರ್ಜ್​ ಮಾಡಿ ಬಳಕೆ ಮಾಡೋದೂ ಕೂಡ ತಪ್ಪೇ. ಹೀಗಾಗಿ ಮೊಬೈಲ್​ನ್ನ 100 ಪೆರ್ಸೆಂಟ್​ ಚಾರ್ಜ್​ ಮಾಡುವ ಅಭ್ಯಾಸವನ್ನ ಬಿಟ್ಟುಬಿಡಿ. 80-85 ಪರ್ಸೆಂಟ್​ ಚಾರ್ಜ್​ ಆಗುತ್ತಿದ್ದಂತಯೇ ಚಾರ್ಜಿಂಗ್​​​ನ್ನು ಬಂದ್​ ಮಾಡಿ.

ಇನ್ನು ಕೆಲ ಮಂದಿ ಫೋನ್​ ಬ್ಯಾಟರಿ ಪೂರ್ತಿ ಖಾಲಿಯಾದ ಬಳಿಕವೇ ಚಾರ್ಜಿಂಗ್​​ಗೆ ಹಾಕ್ತಾರೆ. ಹಾಗೂ 100 ಪರ್ಸೆಂಟ್​  ಚಾರ್ಜಿಂಗ್​ ಬಳಿಕ  ಮತ್ತೆ ಮೊಬೈಲ್​ ಬ್ಯಾಟರಿ ಡೆಡ್​ ಆಗುವವರೆಗೂ ಬಳಕೆ ಮಾಡ್ತಾರೆ. ಆದರೆ ಈ ಅಭ್ಯಾಸ ಕೂಡ ತಪ್ಪು. ಮೊಬೈಲ್​ ಬ್ಯಾಟರಿ 20 ಪರ್ಸೆಂಟ್​ಗೆ ಬರ್ತಿದ್ದಂತೆಯೇ ಮೊಬೈಲ್​ ಬ್ಯಾಟರಿಯನ್ನ ಚಾರ್ಜ್​ ಮಾಡಿ. 80 ಪ್ರತಿಶತಕ್ಕೆ ಬಂದ್​ ಮಾಡಿ.

ಮೊಬೈಲ್​ ಫೋನ್​ ಚಾರ್ಜಿಂಗ್​​ನಲ್ಲಿ ಇರುವ ವೇಳೆಯಲ್ಲೇ ಮೊಬೈಲ್​ ಫೋನ್​ ಬಳಕೆ ಮಾಡಬೇಡಿ. ಬೇಕಿದ್ದರೆ ಮೊಬೈಲ್​ ಸ್ವಿಚ್​ ಆಫ್​ ಮಾಡಿ ಚಾರ್ಜ್​ ಮಾಡಿ. ಸ್ವಿಚ್​ ಆಫ್​ ಮಾಡೋದು ಅಸಾಧ್ಯ ಎನಿಸಿದ್ರೆ ಕೊನೆ ಪಕ್ಷ ಚಾರ್ಜಿಂಗ್​ ವೇಳೆ ಮೊಬೈಲ್​ನ್ನು ಬಳಕೆ ಮಾಡದಿರಿ. ಚಾರ್ಜಿಂಗ್​ ವೇಳೆ ವಿಡಿಯೋ ನೋಡೋದು, ಗೇಮ್ಸ್ ಆಡೋದು ಇಲ್ಲವೇ ಯಾರಿಗಾದರೂ ಕರೆ ಮಾತನಾಡೋದು ಇಂತಹ ಅಭ್ಯಾಸಗಳನ್ನ ಬಿಟ್ಟು ಬಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...