alex Certify ʼಕೊರೊನಾʼ ತಡೆಗೆ ರಮ್ ಮದ್ದು ಎಂದ ಕೌನ್ಸಿಲರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ತಡೆಗೆ ರಮ್ ಮದ್ದು ಎಂದ ಕೌನ್ಸಿಲರ್…!

ಜಗತ್ತಿನ ಜನರೆಲ್ಲರೂ ಕೊರೊನಾ ವಿರುದ್ಧದ ಔಷಧಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವಿಜ್ಞಾನಿಗಳೆಲ್ಲರೂ ತಲೆಕೆಡಿಸಿಕೊಂಡು ಹಗಲು – ರಾತ್ರಿ ಎನ್ನದೆ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಆದರೆ, ಕರ್ನಾಟಕದ ಕಾಂಗ್ರೆಸ್ ಕೌನ್ಸಿಲರ್‌ ಒಬ್ಬರು ಕೊರೊನಾಕ್ಕೆ ಅದ್ಭುತ(?)ವಾದ ಮನೆ ಮದ್ದೆರಡನ್ನು ಸಲಹೆ ಮಾಡಿದ್ದಾರೆ. ರಮ್ ಹಾಗೂ ಅರೆಹುರಿದ ಮೊಟ್ಟೆಯನ್ನು ಮನೆ ಮದ್ದಾಗಿ ಬಳಸಿದರೆ, ಕೊರೊನಾ ಹೆದರಿ ಓಡಿ ಹೋಗಿತ್ತದೆಯಂತೆ.

ಮಂಗಳೂರಿನ ಉಳ್ಳಾಲ ವಾರ್ಡ್ ಸದಸ್ಯ ರವಿಚಂದ್ರ ಗತ್ತಿ ಕೊರೊನಾ ತಡೆ ಸಮಿತಿ ಸದಸ್ಯರೂ ಆಗಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ.‌ ಆದರೆ ನಾನು ರಮ್ ಕುಡಿಯುವವನಲ್ಲ, ಮೀನು ತಿನ್ನುತ್ತೇನೆ ಎಂದಿದ್ದಾರೆ.

ಕೊರೊನಾಕ್ಕೆ ರಮ್ ನಿಜವಾದ ಔಷಧಿ. 90 ಎಂಎಲ್ ರಮ್ ಗೆ ಒಂದು ಟೀ ಚಮಚದಷ್ಟು ಕಾಳು ಮೆಣಸಿನ ಪುಡಿ ಹಾಕಿ ಬೆರಳಲ್ಲಿ ಚೆನ್ನಾಗಿ ಕಲಕಿ ಕುಡಿಯಬೇಕು. ಅರೆಹುರಿದ ಮೊಟ್ಟೆ ಅಥವಾ ಆಮ್ಲೆಟ್ ನ್ನು ಕನಿಷ್ಠ ಎರಡು ತಿನ್ನಬೇಕಂತೆ. ಹೀಗೆ ಮಾಡಿದರೆ, ಕೊರೊನಾ ನಾಶವಾಗಿಬಿಡುತ್ತದಂತೆ.

ಇದೀಗ ಇವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಚುನಾಯಿತ ಪ್ರತಿನಿಧಿಯೊಬ್ಬರು ಮದ್ಯಪಾನಕ್ಕೆ ಪ್ರೋತ್ಸಾಹ ನೀಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಇವರ ಸಲಹೆ ನಿಜವೆಂದೇ ನಂಬಿ ಜನ ಅನುಸರಿಸಲು ಮುಂದಾದರೆ ಗತಿಯೇನು ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...