alex Certify ಡ್ರಗ್ಸ್ ಮಾರಾಟಗಾರರ ಬಂಧನದ ಬಳಿಕ ಬಯಲಾಯ್ತು ಸ್ಫೋಟಕ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಮಾರಾಟಗಾರರ ಬಂಧನದ ಬಳಿಕ ಬಯಲಾಯ್ತು ಸ್ಫೋಟಕ ಮಾಹಿತಿ

ಕರ್ನಾಟಕದ ಕೆಲ ಹೆಸರಾಂತ ನಟ-ನಟಿಯರು, ಸಂಗೀತ ಕಲಾವಿದರು, ಗಾಯಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದ್ದು, ಮಾದಕದ್ರವ್ಯ ನಿಗ್ರಹ ದಳ (ಎನ್ ಸಿ ಬಿ)ದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.

ಖಚಿತ ಮಾಹಿತಿ ಆಧಾರದ ಮೇರೆಗೆ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರಾಯಲ್ ಸ್ಯೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದಾಗ 96 ಎಂಡಿಎಂಎ ಮಾತ್ರೆಗಳು, 180 ಎಲ್ ಎಸ್ ಡಿ ಜಪ್ತಿ ಮಾಡಿದ್ದು, 2.20 ಲಕ್ಷ ರೂ. ನಗದು ಕೂಡ ವಶಕ್ಕೆ ಪಡೆಯಲಾಗಿದೆ.

ಇದರ ಬೆನ್ನಲ್ಲೇ ದಾಳಿ ಮುಂದುವರಿಸಿದಾಗ ದೊಡ್ಡಗುಬ್ಬಿಯ ಮನೆಯೊಂದರಲ್ಲಿ 270 ಎಂಡಿಎಂಎ ಮಾತ್ರೆಗಳು ಸಿಕ್ಕಿದ್ದು, ಇದರ ಹಿಂದಿನ ಕಿಂಗ್ ಪಿನ್ ಮಹಿಳೆಯನ್ನೂ ಬಂಧಿಸಲಾಗಿದೆ.

ಅನಿಕಾ ಡಿ., ಎಂ.ಅನೂಪ್, ಪಿ. ರವೀಂದ್ರನ್ ಬಂಧಿತ ಆರೋಪಿಗಳು. ಪ್ರಾಥಮಿಕ ಮಾಹಿತಿ ಪ್ರಕಾರ ಹಲವು ಹೆಸರಾಂತ ನಟ-ನಟಿಯರು, ಗಾಯಕರು ಇವರಿಂದ ಮಾದಕದ್ರವ್ಯ ಪಡೆದಿದ್ದು, 1500 ದಿಂದ 2500 ರೂ.ವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಎನ್ ಸಿ ಬಿ (ಕಾರ್ಯಾಚರಣೆ) ಉಪ ನಿರ್ದೇಶಕ ಕೆಪಿಎಸ್ ಮಲ್ಹೊತ್ರಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...