alex Certify ರಜೆಯ ಮಜಕ್ಕೆ ಹೇಳಿ ಮಾಡಿಸಿದ ಸ್ಥಳ ಬುರುಡೆ ಫಾಲ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜೆಯ ಮಜಕ್ಕೆ ಹೇಳಿ ಮಾಡಿಸಿದ ಸ್ಥಳ ಬುರುಡೆ ಫಾಲ್ಸ್….!

ಮಲೆನಾಡು ಅಂದಮೇಲೆ ಜಲಪಾತಗಳು ಇಲ್ಲ ಅಂದರೆ ಹೇಗೆ..? ಆದರೆ ಎಲ್ಲಾ ಜಲಪಾತಗಳು ಜನರಿಗೆ ಹೆಚ್ಚು ಚಿರಪರಿಚಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಿಂದ 20ಕಿಲೋಮೀಟರ್​ ದೂರದಲ್ಲಿ ನಿಮಗೆ ಹಚ್ಚ ಹಸಿರಿನ ಮಲೆನಾಡಿನ ಮಧ್ಯೆ ಸುಂದರ ಜಲಪಾತ ಕಾಣಸಿಗುತ್ತೆ. ಇದನ್ನ ಬುರುಡೆ ಫಾಲ್ಸ್​ ಎಂದು ಕರೆಯುತ್ತಾರೆ.

ಈ ಬುರುಡೆ ಫಾಲ್ಸ್​ಗೆ ಇಳಿಮನೆ ಫಾಲ್ಸ್ ಎಂಬ ಹೆಸರೂ ಇದೆ. ಚಾರಣಪ್ರಿಯರಿಗೆ ಇದು ಹೇಳಿ ಮಾಡಿಸಿದಂತಹ ಪಿಕ್​ನಿಕ್​ ಸ್ಪಾಟ್​ ಆಗಿದೆ. ಆದರೆ ಮಳೆಗಾಲದ ಸಂದರ್ಭದಲ್ಲಿ ಈ ಜಾಗಕ್ಕೆ ಭೇಟಿ ನೀಡೋದು ಅಷ್ಟೊಂದು ಸೂಕ್ತವಲ್ಲ, ಇಲ್ಲಿನ ಕಲ್ಲುಗಳು ತುಂಬಾನೆ ಜಾರೋದ್ರಿಂದ ಮಳೆಗಾಲದಲ್ಲಿ ಜಲಪಾತಕ್ಕೆ ಭೇಟಿ ನೀಡೋ ಪ್ಲಾನ್​ ಮಾಡದಿದ್ದರೇನೆ ಒಳ್ಳೆಯದು.

ಸಿದ್ದಾಪುರದಿಂದ ನೀವು ಸೋವಿನ ಕೊಪ್ಪ ಮಾರ್ಗವಾಗಿ ಈ ಫಾಲ್ಸ್ ತಲುಪಬಹುದಾಗಿದೆ. ಶಿರಸಿಯಿಂದ ಈ ಫಾಲ್ಸ್​ಗೆ ಬರುವವರಾದ್ರೆ ಸಿದ್ದಾಪುರ ಕುಮಟಾ ರಸ್ತೆ ಮೂಲಕ ಕ್ಯಾದಗಿ ಗ್ರಾಮಕ್ಕೆ ಬಂದು ನೀವು ಬುರುಡೆ ಫಾಲ್ಸ್ ತಲುಪಬೇಕಾಗುತ್ತದೆ. ಶಿರಸಿಯಿಂದ ಇದು ಸುಮಾರು 40 ಕಿಮೀ ದೂರದಲ್ಲಿದ್ದರೆ ಸಿದ್ದಾಪುರದಿಂದ 20 ಕಿಲೋಮೀಟರ್​ ದೂರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...