alex Certify ಬೇಡಿದ್ದನ್ನ ಕರುಣಿಸುವ ಸೌತಡ್ಕ ʼಶ್ರೀ ಮಹಾಗಣಪತಿ ಕ್ಷೇತ್ರʼದ ಮಹಿಮೆ ಕೇಳಿದ್ದೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡಿದ್ದನ್ನ ಕರುಣಿಸುವ ಸೌತಡ್ಕ ʼಶ್ರೀ ಮಹಾಗಣಪತಿ ಕ್ಷೇತ್ರʼದ ಮಹಿಮೆ ಕೇಳಿದ್ದೀರಾ…..?

ಅದು ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ ನೆಲೆ ನಿಂತಿರುವ ಪುಣ್ಯ ಸ್ಥಾನ. ತನ್ನ ಬೇಡುವ ಭಕ್ತರ ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರು ಎಂದೂ ಕೈ ಬಿಡದ, ಗಣೇಶನ ನೆಲೇಬಿಡೇ ಸೌತಡ್ಕ ಮಹಾಗಣಪತಿ ಕ್ಷೇತ್ರ. ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಗಣಪತಿಯ ಕ್ಷೇತ್ರ ಮಹಾತ್ಮೆ ಅಪಾರ.

ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವ ರಸ್ತೆಯ ಮಧ್ಯದಲ್ಲೇ ಇರುವಂತಹ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಧರ್ಮಸ್ಥಳದಿಂದ 17 ಕೀಮೀ ದೂರದಲ್ಲಿರುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಭಕ್ತರ ಪಾಲಿಗೆ ಪರಮ ಪವಿತ್ರವೂ, ಶ್ರಧ್ಧೆ, ಭಕ್ತಿ ಕೇಂದ್ರವೂ ಹೌದು.

ಸುತ್ತಲೂ ಗಂಟೆಗಳ ರಾಶಿ, ಪ್ರಶಾಂತವಾದ ವಾತವಾರಣ, ಭಕ್ತರ ನಡುವೆ ನೆಲೆ ನಿಂತಿರುವ ಪ್ರಥಮ ವಂದಿತ ಗಣಪತಿ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ದ ಸೌತಡ್ಕದಲ್ಲಿ. ಭಕ್ತರನ್ನು ಹತ್ತಿರಂದಿಂದಲೇ ದರ್ಶನ ಭಾಗ್ಯನೀಡುವ ಮಹಾಗಣಪತಿ ತನ್ನ ಕಾರಣಿಕದಿಂದಲೇ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆದಿದ್ದಾನೆ. ತನ್ನೆದುರಲ್ಲಿ ನಿಂತು ತನ್ಮಯರಾಗಿ, ಭಕ್ತಿ ಭಾವದಿಂದ ಗಣಪತಿಯನ್ನು ಆರಾಧಿಸಿದ್ರೆ ಸಾಕು ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತಾನೆ, ಅಖಿಲಾಂಡ ಕೋಟಿಯ ಹೃದಯದಲ್ಲಿ ನೆಲೆಸಿರುವ ಮಹಾಗಣಪತಿ ನಂಬಿದವರ ಪಾಲಿನ ಆರಾಧ್ಯ ದೈವವಾಗಿದ್ದಾನೆ.

ಅತ್ಯಂತ ಸರಳವಾಗಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಹರಕೆಯೂ ಕೂಡಾ ಅತೀ ಸರಳವಾಗಿರುತ್ತದೆ, ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಗಂಟೆಯನ್ನಷ್ಟೇ. ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ.

ತಾವು ತೋಡಿಕೊಂಡ ಬೇಡಿಕೆ ಈಡೇರಿಸಿದ ಬಳಿಕವೇ ಇಲ್ಲಿಗೆ ಭಕ್ತಾಧಿಗಳು ಗಂಟೆಯನ್ನು ಸಮರ್ಪಿಸುತ್ತಾರೆ, ದಿನವೊಂದಕ್ಕೆ ನೂರರಿಂದ ಅಧಿಕ ಗಂಟೆಗಳು ಕ್ಷೇತ್ರದಲ್ಲಿ ಸಮರ್ಪಿತವಾಗುತ್ತದೆ, ಅತೀ ಸಣ್ಣ ಗಂಟೆಯಿಂದ ಆರಂಭಗೊಂಡು, ನೂರು ಕೆಜಿ ಯವರೆಗಿನ ದೊಡ್ಡ ದೊಡ್ಡ ಗಂಟೆಗಳೂ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಹರಿದು ಬರುತ್ತದೆ, ಭಕ್ತರು ತಮ್ಮ ಅಭೀಷ್ಠೆ ನೆರವೇರಿದ ಬಳಿಕ ಕ್ಷೇತ್ರಕ್ಕೆ ಬಂದು ಗಂಟೆ ಸಮರ್ಪಣೆ ಮಾಡಿ ಹೋಗುತ್ತಾರೆ, ಅಷ್ಟಕ್ಕೂ ಕಷ್ಚಗಳು ನಿವಾರಣೆಯಾದ ಬಳಿಕ ಗಂಟೆಯನ್ನು ದೇವಸ್ಥಾನದಲ್ಲಿ ಕಟ್ಟೋದು ಇಲ್ಲಿನ ಸಂಪ್ರದಾಯವಾಗಿರೋದ್ರಿಂದ ಇಲ್ಲಿ ಕಟ್ಟಿರುವ ಗಂಟೆಗಳೇ ಭಕ್ತರ ಕಷ್ಟ ದೂರವಾಗಿರೋದಕ್ಕೆ ಸಾಕ್ಷಿ ನುಡಿಯುತ್ತದೆ, ಪ್ರತಿವರ್ಷ 11 ಟನ್ ಗಂಟೆಗಳು ಕ್ಷೇತ್ರಕ್ಕೆ ಬರುತ್ತಿವೆ ಅಂದ್ರೆ ನೀವು ನಂಬಲೇ ಬೇಕು.

ಒಟ್ಟಿನಲ್ಲಿ ಸಕಲ ಭಕ್ತರನ್ನು ಹರಸುವ, ಸಕಲ ಭಕ್ತರ ಇಷ್ಟಾರ್ಥ ನೆರವೇರಿಸುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಅತ್ಯಂತ ಪವಿತ್ರವಾಗಿ, ಶ್ರಧ್ದಾ – ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ, ಶಿವನ ಆಲಯವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯನ ಆಲಯವಾಗಿ ಕುಕ್ಕೆ ಸುಬ್ರಹ್ಮಣ್ಯವೂ, ಗಣಪತಿಯ ಆಲಯವಾಗಿ ಸೌತಡ್ಕ ಕ್ಷೇತ್ರವು ಗುರುತಿಸಿಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...