alex Certify BIG NEWS: ಗ್ರಾಮ ಪಂಚಾಯಿತಿಗಳಿಗೆ 6 ತಿಂಗಳ ಆಡಳಿತ ಸಮಿತಿ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗ್ರಾಮ ಪಂಚಾಯಿತಿಗಳಿಗೆ 6 ತಿಂಗಳ ಆಡಳಿತ ಸಮಿತಿ ನೇಮಕ

ಬೆಂಗಳೂರು: ಆಡಳಿತ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಲು ಸರ್ಕಾರ ಮುಂದಾಗಿದೆ. ಹಾಲಿ ಸದಸ್ಯರ ಅವಧಿಯನ್ನೇ ಮುಂದುವರೆಸಬೇಕೆಂದು ವಿರೋಧಪಕ್ಷಗಳ ಒತ್ತಾಯವನ್ನು ಸರ್ಕಾರ ಪರಿಗಣಿಸದೆ ಗ್ರಾಮ ಪಂಚಾಯಿತಿಗಳಿಗೆ ನೂತನ ಆಡಳಿತ ಸಮಿತಿ ನೇಮಿಸಲು ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ಜೂನ್ ತಿಂಗಳಲ್ಲಿ 2600 ಗ್ರಾಮಪಂಚಾಯಿತಿಗಳ ಅಧಿಕಾರವಧಿ ಕೊನೆಗೊಳ್ಳಲಿದ್ದು ಜುಲೈ ತಿಂಗಳಲ್ಲಿ ಉಳಿದ ಗ್ರಾಮ ಪಂಚಾಯಿತಿಗಳ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಅಧಿಕಾರ ಅವಧಿ ಪೂರ್ಣಗೊಂಡ ರಾಜ್ಯದ 6021 ಗ್ರಾಮ ಪಂಚಾಯಿತಿಗಳಿಗೆ ಹಾಲಿ ಸದಸ್ಯರನ್ನೇ ಮುಂದುವರಿಸಬೇಕೆಂದು ವಿರೋಧ ಪಕ್ಷಗಳ ನಾಯಕರು ಸಲಹೆ ನೀಡಿದ್ದಾರೆ.

ಆದರೆ, ಸರ್ಕಾರ ಅವಧಿ ಮುಗಿಯಲಿರುವ ಗ್ರಾಮಪಂಚಾಯಿತಿಗಳಿಗೆ ಆರು ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಿಸಲಿದೆ. ಯಾವುದೇ ಗ್ರಾಮಪಂಚಾಯಿತಿಗಳ ಆಡಳಿತ ಅವಧಿ ಮುಂದುವರೆಸದೇ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...