alex Certify ಗೃಹಿಣಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರ್ಕಾರಿ ನೌಕರನಿಂದ ನೀಚ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಿಣಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರ್ಕಾರಿ ನೌಕರನಿಂದ ನೀಚ ಕೃತ್ಯ

ಬೆಂಗಳೂರು: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರ್ಕಾರಿ ನೌಕರ ಮಹಿಳೆಯ ಖಾಸಗಿ ಫೋಟೋ ಹರಿಬಿಟ್ಟಿದ್ದಾನೆ.

ಮಹಿಳೆ ಲಾಕ್ಡೌನ್ ಸಂದರ್ಭದಲ್ಲಿ ಭೇಟಿಯಾಗದ ಕಾರಣಕ್ಕೆ ಆಕ್ರೋಶಗೊಂಡ ನೌಕರ ಖಾಸಗಿ ಫೋಟೋವನ್ನು ಮಹಿಳೆಯ ಪತಿಯ ಅಣ್ಣನಿಗೆ ಕಳುಹಿಸಿದ್ದಾನೆ. ಬೆಂಗಳೂರಿನ ಕೆಆರ್ ಪುರ ನಿವಾಸಿಯಾಗಿರುವ 36 ವರ್ಷದ ಮಹಿಳೆಯ ಪತಿ ವಿಕಲಚೇತನರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಎರಡು ಬಾಡಿಗೆ ಮನೆಗಳಿಂದ ಬರುವ ಆದಾಯದಲ್ಲಿ ಕುಟುಂಬದ ಜೀವನ ನಡೆಯುತ್ತಿದೆ.

8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 27 ವರ್ಷದ ಅವಿವಾಹಿತ ಸರ್ಕಾರಿ ನೌಕರನ ಪರಿಚಯವಾಗಿದೆ. ಮಹಿಳೆಯೊಂದಿಗೆ ನೌಕರ ಅಕ್ರಮ ಸಂಬಂಧ ಬೆಳೆಸಿದ್ದು ಆಕೆಯಿಂದ ಆಗಾಗ ಹಣ ಪಡೆಯುತ್ತಿದ್ದ. ಲಾಕ್ಡೌನ್ ಸಂದರ್ಭದಲ್ಲಿ ಭೇಟಿಯಾಗುವಂತೆ ಪೀಡಿಸಿದ್ದಾನೆ.

ಹಣ ಕೊಡದಿದ್ದರೆ, ಭೇಟಿಯಾಗದಿದ್ದರೆ ಖಾಸಗಿ ಕ್ಷಣಗಳ ಪೋಟೋ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ಇದಕ್ಕೆ ಮಹಿಳೆ ತಲೆಕೆಡಿಸಿಕೊಂಡಿಲ್ಲ. ಆಕ್ರೋಶಗೊಂಡ ನೌಕರ ಮಹಿಳೆಯ ಖಾಸಗಿ ದೃಶ್ಯವನ್ನು ಆಕೆಯ ಪತಿಯ ಅಣ್ಣನಿಗೆ ಕಳುಹಿಸಿದ್ದಾನೆ. ಮಹಿಳೆ ಕುಟುಂಬದವರು ಪರಿಹಾರ ಕೌಟುಂಬಿಕ ಸಲಹಾ ಕೇಂದ್ರದ ಮೊರೆ ಹೋಗಿದ್ದು ಅಲ್ಲಿ ವಿಚಾರಣೆಯ ವೇಳೆ ನೌಕರ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...