alex Certify ಶಾರೂಖ್​​ ಕಾಲ್ ಶೀಟ್ ಗಾಗಿ ಹಗಲಿರುಳು ಮನೆ ಮುಂದೆ ಕಾಯುತ್ತಿರುವ ನಿರ್ಮಾಪಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಖ್​​ ಕಾಲ್ ಶೀಟ್ ಗಾಗಿ ಹಗಲಿರುಳು ಮನೆ ಮುಂದೆ ಕಾಯುತ್ತಿರುವ ನಿರ್ಮಾಪಕ..!

ಬೆಂಗಳೂರು ಮೂಲದ ಜಯಂತ್​ ಸೀಗೆ ಬಾಲಿವುಡ್​ ಬಾದ್ ಶಾ ಶಾರೂಖ್​ ಖಾನ್​ರನ್ನ ಭೇಟಿಯಾಗುವ ಪಣ ತೊಟ್ಟಿದ್ದಾರೆ. ಬಾಲಿವುಡ್​ ಸೂಪರ್​ಸ್ಟಾರ್​ ನಿವಾಸ ಮನ್ನತ್​ನ ಹೊರಗೆ ಈ ನಿರ್ಮಾಪಕ ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದಾರೆ. ಶಾರುಖ್​ರನ್ನ ಭೇಟಿಯಾಗುವವರೆಗೂ ತಾವು ಇಲ್ಲೇ ಇರೋದಾಗಿ ಹೇಳಿದ್ದಾರೆ.

ಆಗಸ್ಟ್​​ನಲ್ಲಿ ನಾನು ಶಾರೂಖ್ ಸಂದರ್ಶನವನ್ನ ನೋಡುತ್ತಿದ್ದೆ. ಆಗ ಶಾರೂಖ್​ ಝಿರೋ ಸಿನಿಮಾದ ಬಳಿಕ ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ ಎಂದು ಹೇಳಿದ್ರು. ಹೀಗಾಗಿ ನನ್ನ ಸಿನಿಮಾಗೆ ಶಾರೂಖ್​ ಹೀರೋ ಆದರೆ ಹೇಗೆ ಅಂತಾ ಯೋಚನೆ ಮಾಡಿದೆ. ರಾತ್ರಿಯಿಡೀ ಕೂತು ಸಿನಿಮಾದ ಪೋಸ್ಟರ್​​ಗಳನ್ನ ನಿರ್ಮಾಣ ಮಾಡಿ ಅದನ್ನ ಟ್ವೀಟ್​ ಮಾಡಿ ಶಾರೂಖ್​ರನ್ನ ಟ್ಯಾಗ್​ ಮಾಡಿದ್ದೇನೆ ಎಂದು ಹೇಳಿದ್ರು.

ಇದೀಗ ಶಾರೂಖ್​ ಖಾನ್​ಗೆ ತನ್ನ ಸ್ಕ್ರಿಪ್ಟ್ ಬಗ್ಗೆ ಮುಖಾಮುಖಿಯಾಗಿ ಮಾತನಾಡಲಿಕ್ಕಾಗಿ ಡಿಸೆಂಬರ್​ನಲ್ಲಿ ಜಯಂತ್​ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ರು. ಅಂದಿನಿಂದ ಪ್ರತಿದಿನ ಸೂರ್ಯೋದಯದಿಂದ ಮಧ್ಯರಾತ್ರಿಯವರೆಗೂ ಶಾರೂಖ್​ ಮನೆ ಬಾಗಿಲಲ್ಲೇ ನಿಂತು ಕಾಯುತ್ತಾರೆ. ಶಾರೂಖ್​ ಮನೆಯ ಭದ್ರತಾ ಸಿಬ್ಬಂದಿ ಕೂಡ ಸ್ನೇಹದಿಂದ ವರ್ತಿಸಿದ್ದಾರಂತೆ.

ಶಾರೂಖ್ ಖಾನ್​ ತಮ್ಮ ಸಿನಿಮಾಗೆ ಸಹಿ ಮಾಡುವವರೆಗೂ ಇಲ್ಲೇ ಇರ್ತೇನೆ ಅನ್ನೋ ಜಯಂತ್​ ಸಾಮಾಜಿಕ ಜಾಲತಾಣದಲ್ಲಿ ತಮಗೆ ಸಾಥ್​ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.

“In August, when I came across Shahrukh Khan’s interview where he said that he hadn’t signed any new movies since Zero,…

Posted by Humans of Bombay on Thursday, January 7, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...