alex Certify ಹೋಟೆಲ್​ಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಐನಾತಿ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್​ಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಐನಾತಿ ದಂಪತಿ…!

ಗೋವಾ ಮೂಲದ ವ್ಯಕ್ತಿಯೊಬ್ಬ ವಿಐಪಿ ಎಂದು ಹೇಳಿಕೊಂಡು ಹೋಟೆಲ್​​ವೊಂದನ್ನ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೆಕೌಟ್​ ಮಾಡಿ ಬಿಲ್​ ಪಾವತಿ ಮಾಡುವ ಸಮಯ ಬಂದಾಗ ಆರೋಪಿ ಮತ್ತಾತನ ಪತ್ನಿ ಹೋಟೆಲ್​​ನಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನ ಸ್ವಪ್ನಿಲ್​ ನಾಯಕ್​​ ಎಂದು ಗುರುತಿಸಲಾಗಿದೆ.

ಈತ ವಿಐಪಿ ಎಂದು ಹೇಳಿಕೊಂಡು ತನ್ನ ಅಂಗರಕ್ಷಕರಿಗೂ ಮೋಸ ಮಾಡಿದ್ದ ಎನ್ನಲಾಗಿದೆ. ಪೊಲೀಸರ ವರದಿ ಪ್ರಕಾರ ನಾಯಕ್​​​ ಜನವರಿ 2ರಂದು ಗಾಂಧಿನಗರದ ಜಿಯಾನ್​ ಹೋಟೆಲ್​​ಗೆ ಆಗಮಿಸಿ ಕೊಠಡಿ ಕಾಯ್ದಿರಿಸಿದ್ದ ಎನ್ನಲಾಗಿದೆ.

ಆರು ದಿನಗಳ ಬಳಿಕ ನಾಯಕ್​ ಪತ್ನಿ ಜನವರಿ 8ನೇ ತಾರೀಖಿನಂದು ತನ್ನ ಅಂಗರಕ್ಷಕರಿಗೆ ಇನ್ನೂ ಎರಡು ಕೊಠಡಿಗಳನ್ನ ಬುಕ್​ ಮಾಡಿದ್ದರು ಎನ್ನಲಾಗಿದೆ. ಒಂದು ದಿನದ ಬಳಿಕ ಅವರು ಮಿನಿ​ ಬಸ್​ ಒಂದನ್ನ ತೆಗೆದುಕೊಂಡು ರಾಮನಗರ ಕಡೆ ಪ್ರವಾಸಕ್ಕೆ ಹೋದವರು ಮತ್ತೆ ಹೋಟೆಲ್​ಗೆ ವಾಪಸ್ಸಾಗಿಲ್ಲ.

ಈ ಆರೋಪಿ ದಂಪತಿ ಅಂಗರಕ್ಷಕರು ಹಾಗೂ ಮಿನಿ ಬಸ್​ ಮಾಲೀಕನಿಗೂ ಹಣ ನೀಡದೇ ವಂಚಿಸಿದ್ದಾರೆ ಎನ್ನಲಾಗಿದೆ. ಹೋಟೆಲ್​ ಸಿಬ್ಬಂದಿ ನೀಡಿದ ದೂರಿನ ಪ್ರಕಾರ ಆಹಾರ ಹಾಗೂ ವಸತಿ ಸೇರಿಸಿ ಹೋಟೆಲ್​​ನಲ್ಲಿ 1,43,243 ರೂಪಾಯಿ ಬಿಲ್​ ಪಾವತಿ ಮಾಡಬೇಕಿದೆ. ಆರೋಪಿ ದಂಪತಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...