alex Certify ಬೆಂಗಳೂರು ಗಲಭೆ: ನವೀನ್ ವಿಚಾರಣೆ ವೇಳೆ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಗಲಭೆ: ನವೀನ್ ವಿಚಾರಣೆ ವೇಳೆ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣವೆನ್ನಲಾದ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ಮೊಬೈಲ್ ಪತ್ತೆಯಾಗಿಲ್ಲ.

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ನಾನೇ ಎಂದು ಆರೋಪಿ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆಯಲ್ಲಿ ನವೀನ್ ವಿವಾದಾತ್ಮಕ ಫೋಟೋ ಪೋಸ್ಟ್ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್, ಕಾಮೆಂಟ್ ಜೊತೆ ವಿವಾದಾತ್ಮಕ ಫೋಟೋವನ್ನು ಪೋಸ್ಟ್ ಮಾಡಿದ್ದೆ. 7 ಗಂಟೆ ಸುಮಾರಿಗೆ ಪೋಸ್ಟ್ ಮಾಡಿ 8 ಗಂಟೆಗೆ ಡಿಲೀಟ್ ಮಾಡಲಾಗಿದೆ ಎಂದು ನವೀನ್ ತಿಳಿಸಿದ್ದಾನೆ.

ನಂತರದಲ್ಲಿ ನನ್ನ ಮೊಬೈಲ್ ಕಳೆದುಹೋಗಿದೆ. ಹೀಗೆಲ್ಲಾ ಆಗುತ್ತೆ ಎಂದು ಗೊತ್ತಿರಲಿಲ್ಲ ಎಂದು ಪೂರ್ವ ವಿಭಾಗದ ಪೊಲೀಸರ ವಿಚಾರಣೆ ವೇಳೆ ನವೀನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆದರೆ, ಕಳೆದು ಹೋಗಿದೆ ಎನ್ನಲಾದ ನವೀನ್ ಮೊಬೈಲ್ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...