alex Certify ಮದ್ಯದ ಮತ್ತಿನಲ್ಲಿ ಹಾವು ಸುತ್ತಿಕೊಂಡು ಕಚ್ಚಿ ಬಿಸಾಡಿದ ಯುವಕ, ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಮತ್ತಿನಲ್ಲಿ ಹಾವು ಸುತ್ತಿಕೊಂಡು ಕಚ್ಚಿ ಬಿಸಾಡಿದ ಯುವಕ, ವಿಡಿಯೋ ವೈರಲ್

ಕೋಲಾರ ಜಿಲ್ಲೆಯ ನಂಗಲಿಯಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಅಡ್ಡ ಬಂದ ಹಾವನ್ನು ಕಚ್ಚಿ ಬಿಸಾಡಿದ್ದು,  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಂಗಲಿ ಮುಷ್ಟೂರು ಗ್ರಾಮದ ಕುಮಾರ್ ಎಂಬಾತ ಮದ್ಯ ಸೇವನೆ ಮಾಡಿ ಬೈಕ್ನಲ್ಲಿ ಬರುವಾಗ ರಸ್ತೆಯಲ್ಲಿ ಹಾವು ಅಡ್ಡ ಬಂದಿದೆ. ಅದನ್ನು ಹಿಡಿದುಕೊಂಡು ಕೊರಳಿಗೆ ಸುತ್ತಿಕೊಂಡ ಕುಮಾರ್ ಊರಿಗೆ ಬಂದಿದ್ದಾನೆ. ಒಂದು ಕೈಯಲ್ಲಿ ಮದ್ಯ ಸೇವಿಸಿ ಬೈಕ್ ಚಾಲನೆ ಮಾಡಿದ ಆತ, ಮದ್ಯ ಖಾಲಿಯಾದ ನಂತರ ಕೊರಳಿನಲ್ಲಿದ್ದ ಹಾವನ್ನು ಕೈಯಲ್ಲಿ ಹಿಡಿದು ಕಚ್ಚಿ ಬಿಸಾಡಿದ್ದಾರೆ. ಈ ವಿಡಿಯೋ ಮಾಡಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ. ಯುವಕನಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...