alex Certify ಸಮವಸ್ತ್ರದಲ್ಲೇ ಮದ್ಯ ಸೇವಿಸಿದ್ದ ಪೊಲೀಸ್ ಪೇದೆ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮವಸ್ತ್ರದಲ್ಲೇ ಮದ್ಯ ಸೇವಿಸಿದ್ದ ಪೊಲೀಸ್ ಪೇದೆ ಸಸ್ಪೆಂಡ್

ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ಕಳೆದ 40 ದಿನಗಳಿಗೂ ಅಧಿಕ ಕಾಲದಿಂದ ಮದ್ಯದಂಗಡಿಗಳು ಬಂದ್ ಆಗಿದ್ದವು. ಇದರಿಂದಾಗಿ ಚಡಪಡಿಸುತ್ತಿದ್ದ ಮದ್ಯ ಪ್ರೇಮಿಗಳು ಲಾಕ್ ಡೌನ್ ನಡುವೆಯೂ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತಿದ್ದಂತೆ ಸಂಭ್ರಮಿಸಿದ್ದರು.

ಸೋಮವಾರದಂದು ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಮೈಲುದ್ದದ ಕ್ಯೂ ನಲ್ಲಿ ನಿಂತು ಮದ್ಯ ಖರೀದಿ ಮಾಡಿ ಸೇವಿಸಿ ಸಾರ್ಥಕತೆ ಅನುಭವಿಸಿದ್ದರು. ಹೀಗೆ ಮದ್ಯ ಸೇವನೆ ಮಾಡಿದ ಪೊಲೀಸ್ ಪೇದೆಯೊಬ್ಬ ಈಗ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ರಾಜು ಚವ್ಹಾಣ್, ತಮ್ಮ ಸ್ನೇಹಿತರೊಂದಿಗೆ ಕುಳಿತು ಜಮೀನು ಒಂದರಲ್ಲಿ ಮದ್ಯ ಸೇವಿಸಿದ್ದು, ಈ ವೇಳೆ ಸಮವಸ್ತ್ರ ಧರಿಸಿರುವುದು ಕಂಟಕಪ್ರಾಯವಾಗಿ ಪರಿಣಮಿಸಿದೆ.

ಇವರು ಪೋಲಿಸ್ ಸಮವಸ್ತ್ರದಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅಮಾನತು ಮಾಡಿ ಆದೇಶಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಕರ್ತವ್ಯದಲ್ಲಿದ್ದರೆ ಎಂಬುದರ ಕುರಿತು ತನಿಖೆ ನಡೆಸಲು ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...