alex Certify ಕೊರೊನಾದಿಂದ ಗುಣಮುಖವಾದ ಮಹಿಳೆಗೆ ಮತ್ತೆ ʼಬಿಗ್ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖವಾದ ಮಹಿಳೆಗೆ ಮತ್ತೆ ʼಬಿಗ್ ಶಾಕ್ʼ

ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖವಾಗಿದ್ದ ಮಹಿಳೆಗೆ ಒಂದು ತಿಂಗಳ ನಂತರ ಮತ್ತೆ ಪಾಸಿಟಿವ್ ವರದಿ ಬಂದಿದೆ.

ಬೆಂಗಳೂರಿನ 27 ವರ್ಷದ ಮಹಿಳೆ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರಿಗೆ ಒಂದು ತಿಂಗಳ ನಂತರ ಮತ್ತೆ ಪಾಸಿಟಿವ್ ವರದಿ ಬಂದಿದೆ ಎಂದು ಫೋರ್ಟಿಸ್ ಆಸ್ಪತ್ರೆ ಖಚಿತಪಡಿಸಿದೆ. ರಾಜ್ಯದಲ್ಲಿ ಮರೆಯಾದ ಕೊರೋನಾ ಮತ್ತೆ ಬಂದ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.

ಆಗಸ್ಟ್ 24 ರಂದು ಹಾಂಕಾಂಗ್ ನಲ್ಲಿ ವಿಶ್ವದ ಮೊದಲ ಈ ರೀತಿ ಪ್ರಕರಣ ಕಂಡುಬಂದಿದೆ. ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ರಾಜ್ಯದಲ್ಲಿ ಇಬ್ಬರಿಗೆ ಕೊರೋನಾವೈರಸ್ ಎರಡು ಸಲ ಬಂದಿವೆ ಎಂದು ಹೇಳಿದ್ದಾರೆ. ಮುಂಬೈನ ವೈದ್ಯರೊಬ್ಬರಿಗೆ ಎರಡು ತಿಂಗಳ ಅಂತರದ ನಂತರ ಎರಡನೇ ಸಲ ಕೊರೋನಾ ಪಾಸಿಟಿವ್ ಬಂದಿದೆ. ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಕೊರೊನಾ ಪಾಸಿಟಿವ್ ಬಂದಿರಬಹುದೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...