alex Certify ಮದುವೆಯಾದ ಕೆಲ ಗಂಟೆಯಲ್ಲೇ ವರನಿಗೆ ʼಬಿಗ್ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಕೆಲ ಗಂಟೆಯಲ್ಲೇ ವರನಿಗೆ ʼಬಿಗ್ ಶಾಕ್ʼ

ಮದುವೆ ದಿನವೇ ಮದುಮಗನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ಕೊರೊನಾ ಸೋಂಕು ತಗಲಿದ್ದ ವರನನ್ನು ಮದುವೆ ಮುಗಿದ ಕೆಲ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 19 ರಂದು ಪುಣೆಯಿಂದ ಊರಿಗೆ ಬಂದಿದ್ದ ಯುವಕನನ್ನು ಕ್ವಾರಂಟೈನ್ ನಲ್ಲಿ ಇರಿಸಿ ಮೇ 30ರಂದು ಮನೆಗೆ ಕಳುಹಿಸಲಾಗಿತ್ತು. ಜೂನ್ 15 ರಂದು ಭಾಲ್ಕಿ ತಾಲೂಕಿನ ಕೋನ ಮೆಳಕುಂದಾದಲ್ಲಿ ಮದುವೆ ನೆರವೇರಿದ್ದು, ಮದುವೆ ಮುಗಿಸಿ ಮನೆಗೆ ಬರುವ ವೇಳೆಗೆ ಕೊರೊನಾ ಸೋಂಕು ಇರುವ ಬಗ್ಗೆ ವೈದ್ಯಕೀಯ ವರದಿ ಬಂದಿದೆ. ಮದುವೆಯಾದ ಕೆಲ ಗಂಟೆಯಲ್ಲಿಯೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...