alex Certify ಕೊರೋನಾದಿಂದ ಪಾರಾಗುವ ಪ್ರಯತ್ನದಲ್ಲಿ ಜೀವವೇ ಹೋಯ್ತು, ಅಡ್ಡ ಪರಿಣಾಮ ಬೀರಿದ ಔಷಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾದಿಂದ ಪಾರಾಗುವ ಪ್ರಯತ್ನದಲ್ಲಿ ಜೀವವೇ ಹೋಯ್ತು, ಅಡ್ಡ ಪರಿಣಾಮ ಬೀರಿದ ಔಷಧ

ಕೊರೊನಾ ಸೋಂಕು ತಗಲಬಹುದು ಎಂದು ಹಳ್ಳಿ ಔಷಧ ಸೇವಿಸಿದ ವ್ಯಕ್ತಿ ಮೃತಪಟ್ಟಿದ್ದು ಅವರ ತಂದೆ ಗಂಭೀರ ಸ್ಥಿತಿ ತಲುಪಿದ್ದಾರೆ.

ಶಿರಸಿ ತಾಲೂಕಿನ ರಾಮನಬೈಲಿನಲ್ಲಿ ಘಟನೆ ನಡೆದಿದೆ. 42 ವರ್ಷದ ಫ್ರಾನ್ಸಿಸ್ ರೇಗೊ ಮೃತಪಟ್ಟವರು. ಅವರ ತಂದೆ 70 ವರ್ಷದ ಆಂತೋನಿ ಅಸ್ವಸ್ಥರಾಗಿದ್ದಾರೆ. ಇವರು ಗ್ರಾಮೀಣ ಪ್ರದೇಶದಿಂದ ತಂದಿದ್ದ ಔಷಧ ಸೇವಿಸಿದ್ದಾರೆ.

ಕೊರೋನಾ ದೂರವಾಗುತ್ತದೆ ಎಂದು ಭಾವಿಸಿ ಔಷಧವನ್ನು ಸೇವಿಸಿದ್ದರಿಂದ ಅಡ್ಡಪರಿಣಾಮ ಉಂಟಾಗಿದ್ದು ಫ್ರಾನ್ಸಿಸ್ ರೇಗೊ ಸಾವನ್ನಪ್ಪಿದ್ದಾರೆ. ಅಂತೋನಿ ಅವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...