alex Certify ಒಡತಿಗೆ ಒತ್ತಾಯದಿಂದ ಮದ್ಯ ಕುಡಿಸಿ ದೈಹಿಕ ಸಂಪರ್ಕ ಬೆಳೆಸಿದ ಸಹಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡತಿಗೆ ಒತ್ತಾಯದಿಂದ ಮದ್ಯ ಕುಡಿಸಿ ದೈಹಿಕ ಸಂಪರ್ಕ ಬೆಳೆಸಿದ ಸಹಾಯಕ

ಬೆಂಗಳೂರು: ಕಂಪನಿಯ ಒಡತಿಗೆ ಬಲವಂತವಾಗಿ ಮದ್ಯ ಕುಡಿಸಿದ ಕಚೇರಿ ಸಹಾಯಕ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

42 ವರ್ಷದ ಮಹಿಳೆ ಕಂಪನಿಯೊಂದರ ಒಡತಿಯಾಗಿದ್ದು ಅಲ್ಲೇ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕ ಆಕೆಗೆ ಬಲವಂತದಿಂದ ಮದ್ಯ ಕುಡಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ ಒಡತಿಯ ಬೆತ್ತಲೆ ಫೋಟೋ ತೆಗೆದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ರಾಜರಾಜೇಶ್ವರಿ ನಗರ ನಿವಾಸಿಯಾಗಿರುವ ರಾಕೇಶ್ ಎಂಬವನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಜೆಪಿ ನಗರದ 9ನೇ ಹಂತದಲ್ಲಿ ಸಂತ್ರಸ್ತ ಮಹಿಳೆ ಕಂಪನಿ ಹೊಂದಿದ್ದು ಸಂಬಂಧಿಕರ ಮೂಲಕ ಪರಿಚಿತರಾಗಿದ್ದ ವ್ಯಕ್ತಿಯ ಮಗನಾದ ರಾಕೇಶ್ ನನ್ನು ಕಚೇರಿ ಸಹಾಯಕ ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಏಪ್ರಿಲ್ 22 ರಂದು ಭೇಟಿಯಾಗುವಂತೆ ಬಲವಂತ ಮಾಡಿದ ರಾಕೇಶ್ ಆರ್.ಆರ್. ನಗರದ ಹೋಟೆಲ್ ಬಳಿ ಬಂದಾಗ ಕಾರಿನ ಒಳಗೆ ಬಂದಿದ್ದಾನೆ. ಕಾರಿನಲ್ಲಿಯೇ ಮದ್ಯ ಸೇವಿಸುತ್ತಾ ಕಚೇರಿಗೆ ಬಂದ ಆತ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮಹಿಳೆಯ ಬೆತ್ತಲೆ ಫೋಟೋವನ್ನು ತೆಗೆದುಕೊಂಡಿದ್ದಾನೆ. ಏಪ್ರಿಲ್ 23 ರಂದು ವಾಟ್ಸಾಪ್ ನಲ್ಲಿ ಫೋಟೋ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...