alex Certify BREAKING NEWS: ಬೆಡ್ ಬ್ಲಾಕಿಂಗ್ ದಂಧೆ; ಸ್ವತಃ ಆರೋಗ್ಯ ಸಚಿವರೇ ಶಾಮೀಲು ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಡ್ ಬ್ಲಾಕಿಂಗ್ ದಂಧೆ; ಸ್ವತಃ ಆರೋಗ್ಯ ಸಚಿವರೇ ಶಾಮೀಲು ಆರೋಪ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸ್ವತಃ ಆರೋಗ್ಯ ಸಚಿವರೇ ಶಾಮೀಲಾಗಿದ್ದಾರೆ ಎಂದು ಐಎಂಎ ಮಾಜಿ ಅಧ್ಯಕ್ಷ ಹೆಚ್.ಎನ್. ರವೀಂದ್ರ ಆರೋಪಿಸಿದ್ದಾರೆ.

ಬೆರಗಾಗಿಸುವಂತಿದೆ ಹುಟ್ಟಿದ ಮಗುವಿನ ತೂಕ….!

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವೀಂದ್ರ, ಬೆಂಗಳೂರಿನಲ್ಲಿ ಜನತೆಗೆ ಈಗಲೂ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ಸ್ವತಃ ಆರೋಗ್ಯ ಸಚಿವ ಸುಧಾಕರ್ ಅವರೇ ಬೆಡ್ ಬ್ಲಾಕ್ ಮಾಡಿಸಿದ್ದಾರೆ. ಏರ್ ಪೋರ್ಟ್ ರಸ್ತೆಯಲ್ಲಿರುವ ಆಸ್ಟರ್ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿಸಿದ್ದು, ವಾರ್ ರೂಂ ಪ್ರಕಾರ ಇವತ್ತಿಗೂ ಅಲ್ಲಿ ಬೆಡ್ ಖಾಲಿ ಇಲ್ಲ. ಆದರೆ ವಾಸ್ತವದಲ್ಲಿ ಆಸ್ಟರ್ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿದೆ ಎಂದು ಗುಡುಗಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: 2 ಲಕ್ಷ ರೂ.ಗೆ ಮಾರಾಟವಾಗ್ತಿದೆ ಟಿಕೆಟ್

ಆರೋಗ್ಯ ಸಚಿವರಿಂದಲೇ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಓರ್ವ ವೈದ್ಯರಾಗಿ, ಆರೋಗ್ಯ ಸಚಿವರಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ಆರೋಗ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಒಂದು ವೇಳೆ ಅವರು ಪ್ರಾಮಾಣಿಕವಾಗಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...