alex Certify ಆಂಬುಲೆನ್ಸ್ ಚಾಲಕರಾಗಿ ಬದಲಾದ ಬೈಕರ್ ಸಹೋದರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಬುಲೆನ್ಸ್ ಚಾಲಕರಾಗಿ ಬದಲಾದ ಬೈಕರ್ ಸಹೋದರರು

ಇಡೀ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿರುವ ಈ ಸಂದರ್ಭದಲ್ಲಿ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಾಯಕ್ಕೆ ಕಾಯುವ ಬದಲಾಗಿ ಕೆಲವರು ಜನರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿ ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಆಕ್ಸಿಜನ್​ ಸಪ್ಲೈಯರ್​ ಆಗಿದ್ದಾರೆ. ಶಿಕ್ಷಕರು ಆಹಾರವನ್ನ ಹಂಚ್ತಿದ್ದಾರೆ, ಯುವಜನತೆ ಅಗತ್ಯದಲ್ಲಿ ಇರುವವರಿಗೆ ತುರ್ತು ಸೌಲಭ್ಯ ಒದಗಿಸುತ್ತಿದ್ದಾರೆ. ಹೀಗೆ ಒಬ್ಬರಾದ ಮೇಲೆ ಒಬ್ಬರು ಸಹಾಯ ಹಸ್ತ ಚಾಚಿದ್ದಾರೆ.

ಕೊನೆ ಕ್ಷಣದಲ್ಲಿ ರದ್ದಾಯ್ತು ಮದುವೆ: ಇದರ ಹಿಂದಿದೆ ವಿಚಿತ್ರ ಕಾರಣ

ಇದೇ ರೀತಿ ಬೈಕರ್​ ಆಗಿದ್ದ ಬೆಂಗಳೂರು ಮೂಲದ ಇಬ್ಬರು ಸಹೋದರರು ಇದೀಗ ಆಂಬುಲೆನ್ಸ್ ಚಾಲಕರಾಗಿ ಬದಲಾಗಿದ್ದಾರೆ. ಕೊರೊನಾದಿಂದ ಬಳಲುತ್ತಿರುವವರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ ಈ ಸಹೋದರರು ಆಂಬುಲೆನ್ಸ್ ಚಾಲಕರಾಗಿ ಬದಲಾಗಿದ್ದಾರೆ. ಮುರ್ಥಾಜಾ ಜುನೈದ್ ಹಾಗೂ ಮುತೀಬ್​ ಜೋಹೆಬ್​​ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವ ಯುವ ಸಹೋದರರಾಗಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಮುತೀಬ್​, ಜನರು ಆಸ್ಪತ್ರೆಗಾಗಿ, ಬೆಡ್​ಗಾಗಿ, ಆಕ್ಸಿಜನ್​ ಗಾಗಿ ಪರಿತಪಿಸುತ್ತಿದ್ದ ಸಾಕಷ್ಟು ವಿಡಿಯೋಗಳನ್ನ ನಾವು ಕಂಡಿದ್ದೇವೆ. ಜನರ ನೋವು ಎದ್ದು ಕಾಣುತ್ತಿತ್ತು. ಇದನ್ನೆಲ್ಲ ನೋಡಿದ ಮೇಲೂ ಸುಮ್ಮನೇ ಕುಳಿತುಕೊಂಡು ಉಳಿದವರ ತಪ್ಪನ್ನ ಎತ್ತಿ ಹೇಳೋದು ಸರಿ ಎನಿಸಲಿಲ್ಲ. ಹೀಗಾಗಿ ನಾವೇ ಜನರ ಸೇವೆಗೆ ಸಿದ್ಧರಾದೆವು ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...