alex Certify BIG NEWS: ಸೋನಿಯಾ, ರಾಹುಲ್, ಪ್ರಿಯಾಂಕಾರನ್ನು ಲೀಡರ್ ಗಳೆಂದು ಹೇಳಲು ಆಗಲ್ಲ; ಖರ್ಗೆ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೋನಿಯಾ, ರಾಹುಲ್, ಪ್ರಿಯಾಂಕಾರನ್ನು ಲೀಡರ್ ಗಳೆಂದು ಹೇಳಲು ಆಗಲ್ಲ; ಖರ್ಗೆ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು

ಚಿಕ್ಕಮಗಳೂರು: ‘ರಾಹುಲ್ ಗಾಂಧಿಯನ್ನು ಕಂಡರೆ ಬಿಜೆಪಿಯವರಿಗೆ ಭಯ’ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯವರೇ ಚುನಾವಣೆ ಗೆಲ್ಲಲಿಲ್ಲ. ಯಾವ ಚುನಾವಣೆಯನ್ನು ಗೆದ್ದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ 1 ಕ್ಷೇತ್ರವನ್ನು ಕಾಂಗ್ರೆಸ್ ನವರು ಗೆದ್ದರು. ನಾವು ಬಲಿಷ್ಠ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಚಾರ ನಡೆಸಿದ್ದರೆ ಅಲ್ಲಿಯೂ ನಾವೇ ಗೆಲ್ಲುತ್ತಿದ್ದೆವು. ಕಾಂಗ್ರೆಸ್ ಗೆ ಒಂದು ನಿರ್ದಿಷ್ಟತೆ ಇಲ್ಲ, ಎಡಬಿಡಂಗಿತನದ ಪಕ್ಷವಾಗಿದೆ ಎಂದರು.

ಸಿದ್ದರಾಮಯ್ಯ ಹೇಳಿದಂತೆ ಪ್ಯಾಕೇಜ್ ಘೋಷಿಸಲು ಆಗುತ್ತಾ…? ಡಿಸಿಎಂ ಅಶ್ವತ್ಥನಾರಾಯಣ ಗರಂ

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಲೀಡರ್ ಗಳೆಂದು ಒಪ್ಪುತ್ತೇನೆ. ಆದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಲೀಡರ್ ಗಳೆಂದು ಹೇಳಲು ಆಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿರ್ಧಿಷ್ಟ ತಾತ್ವಿಕ ತಳಹದಿಯೂ ಇಲ್ಲ, ರಾಷ್ಟ್ರೀಯ ನಾಯಕತ್ವವೂ ಇಲ್ಲ. ಅದೊಂದು ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...