alex Certify ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯಿಂದ ಸೆಂಡ್ ಆಯ್ತು ಖಾಸಗಿ ಕ್ಷಣದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯಿಂದ ಸೆಂಡ್ ಆಯ್ತು ಖಾಸಗಿ ಕ್ಷಣದ ವಿಡಿಯೋ

ಬೆಂಗಳೂರು: ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯೊಬ್ಬ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಿತೀಶ್ ಕುಮಾರ್ ಸಿಂಗ್ ಎಂಬಾತನೇ ಈ ರೀತಿ ಮಾಡಿದ ಆರೋಪಿಯಾಗಿದ್ದಾನೆ. ಸಂತ್ರಸ್ತೆಗೆ ಮದುವೆಯಾಗಿ ಪತಿಯೊಂದಿಗೆ ಜರ್ಮನಿಯಲ್ಲಿ ಇದ್ದಾರೆ. ಹರಿಯಾಣ ಮೂಲದ ನಿತೀಶ್ ಕುಮಾರ್ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು ವಿವಾಹಿತೆಯೊಂದಿಗೆ ಗೆಳೆತನವಾಗಿದೆ. ಇಬ್ಬರು ಹೋಟೆಲ್ಗಳಿಗೆ ಹೋಗಿದ್ದಾರೆ. ಮಹಿಳೆಯೊಂದಿಗೆ ಸಲುಗೆಯಿಂದ ಇದ್ದಾಗ ಖಾಸಗಿ ಕ್ಷಣದ ಫೋಟೋ ಮತ್ತು ವಿಡಿಯೋಗಳನ್ನೂ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.

ನಂತರದಲ್ಲಿ ವಿವಾಹಿತೆ ಆತನಿಂದ ದೂರವಾಗಿದ್ದು ಜೂನ್ ತಿಂಗಳಲ್ಲಿ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ತಂದೆಯ ಮನೆಗೆ ಬಂದಿದ್ದಾಳೆ. ಆರೋಪಿ ಮಹಿಳೆಯ ತಂದೆಯೊಂದಿಗೆ ಮಾತನಾಡಿ ತನ್ನೊಂದಿಗೆ ಸಂಬಂಧ ಮುಂದುವರಿಸದಿದ್ದಲ್ಲಿ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ತಂದೆಯ ಫೋನ್ ಗೆ ವಾಟ್ಸಾಪ್ ನಲ್ಲಿ ಫೋಟೋ ವಿಡಿಯೋಗಳನ್ನು ಕಳುಹಿಸಿದ್ದಾನೆ. ಸಂಬಂಧ ಮುಂದುವರೆಸಿದ್ದರೆ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದು, ಆತನ ವಿರುದ್ಧ ಬಸವನಗುಡಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...