alex Certify ಡೇಟಿಂಗ್​ ಅಪ್ಲಿಕೇಶನ್​ ಬಳಸಲು ಬರೋಬ್ಬರಿ 16 ಲಕ್ಷ ರೂ. ಕಳೆದುಕೊಂಡ ಟೆಕ್ಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​ ಅಪ್ಲಿಕೇಶನ್​ ಬಳಸಲು ಬರೋಬ್ಬರಿ 16 ಲಕ್ಷ ರೂ. ಕಳೆದುಕೊಂಡ ಟೆಕ್ಕಿ…!

ನಗ್ನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತೇವೆ ಎಂಬ ಬೆದರಿಕೆಗೆ ಹೆದರಿ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಬರೋಬ್ಬರಿ 16 ಲಕ್ಷ ರೂಪಾಯಿಯನ್ನ ಕಳೆದುಕೊಂಡಿದ್ದಾರೆ.

ಡಿಸೆಂಬರ್​​ 3ರಂದು ಸಂತ್ರಸ್ತ ವ್ಯಕ್ತಿ ಡೇಟಿಂಗ್​ ಅಪ್ಲಿಕೇಶನ್​ ಮೂಲಕ ಶ್ವೇತಾ ಎಂಬಾಕೆಯನ್ನ ಭೇಟಿಯಾಗಿದ್ದರು ಹಾಗೂ ಆಕೆ ಇಂಜಿನಿಯರ್​ ಬಳಿ 2000 ರೂಪಾಯಿಯನ್ನ ಆನ್​​ಲೈನ್​ ಪೇಮೆಂಟ್​ ಮಾಡುವಂತೆ ಹೇಳಿದ್ದಳು.

ಈ ಶ್ವೇತಾ ಇಂಜಿನಿಯರ್​ಗೆ ತನ್ನ ಗೆಳತಿ ನಿಖಿತಾ ಎಂಬವಳ ಮೊಬೈಲ್​ ನಂಬರ್​ನ್ನು ನೀಡಿದ್ದಾಳೆ. ನಿಖಿತಾ ವಿಡಿಯೋ ಕಾಲ್​ ಮಾಡಿ ಇಂಜಿನಿಯರ್​ಗೆ ನಗ್ನ ದೇಹವನ್ನ ತೋರಿಸಿ ಕಾಲ್​ ರೆಕಾರ್ಡ್ ಮಾಡಿದ್ದಾಳೆ. ಇದಾದ ಬಳಿಕ ಇಂಜಿನಿಯರ್​ಗೆ ಬೆದರಿಕೆ ಕರೆಗಳು ಬರೋಕೆ ಆರಂಭವಾಗಿದೆ. ಹಣ ಪಾವತಿ ಮಾಡದೇ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್​ ಮಾಡೋದಾಗಿ ಪ್ರೀತಿ ಅಗರ್​ವಾಲ್​ ಹಾಗೂ ಶೆರಿನ್ ಎಂಬ ಇಬ್ಬರು ಮಹಿಳೆಯರು ಬೆದರಿಕೆ ಹಾಕಿದ್ದರು ಅಂತಾ ಟೆಕ್ಕಿ ಹೇಳಿದ್ದಾರೆ.

ನಾನು ಡಿಸೆಂಬರ್​ 3 ಹಾಗೂ ಡಿಸೆಂಬರ್ 13ನೇ ತಾರೀಖಿನ ನಡುವೆ ವಿವಿಧ ಆನ್​​ಲೈನ್​ ವೇದಿಕೆಯ ಮೂಲಕ 16 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ ಅಂತಾ ಟೆಕ್ಕಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...