alex Certify ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಟೆಲಿ-ಕ್ಲಿನಿಕ್‌ಗೆ ಚಾಲನೆ ಕೊಟ್ಟ ವಿದ್ಯಾರ್ಥಿ ಸಂಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಟೆಲಿ-ಕ್ಲಿನಿಕ್‌ಗೆ ಚಾಲನೆ ಕೊಟ್ಟ ವಿದ್ಯಾರ್ಥಿ ಸಂಘಟನೆ

Bengaluru Students Set up 'Hello Doctor' to Provide Tele-clinic Service to Covid Patients

ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಸೇವಾ ಸಿಬ್ಬಂದಿ ಸೇರಿದಂತೆ ಎಲ್ಲರ ಶ್ರಮ ದಿನೇ ದಿನೇ ಹೆಚ್ಚುತ್ತಿರುವ ನಡುವೆ ಬೆಂಗಳೂರಿನ ವಿದ್ಯಾರ್ಥಿಗಳು ಈ ಹೋರಾಟಕ್ಕೊಂದು ಸ್ಮಾರ್ಟ್ ಟಚ್‌ ಕೊಟ್ಟಿದ್ದಾರೆ.

ʼಕೋವಿಡ್ʼ​ ಸೋಂಕಿತರ ಕುಟುಂಬಕ್ಕೆ ನೆರವಾದ​ ಚಾಲಕ

ಅಖಿಲ ಭಾರತ ಪ್ರಜಾಪ್ರಭುತ್ವ ವಿದ್ಯಾರ್ಥಿಗಳ ಸಂಘಟನೆ ರಾಜ್ಯ ಸಮಿತಿಯು ’ಹಲೋ ಡಾಕ್ಟರ್‌’ ಹೆಸರಿನ ಅಭಿಯಾನವೊಂದನ್ನು ಆರಂಭಿಸಿದ್ದು, ಕೋವಿಡ್ ಬಾಧಿತರಿಗೆ ಟೆಲಿಫೋನ್ ಮೂಲಕ ಉಚಿತವಾಗಿ ವೈದ್ಯಕೀಯ ಸಲಹೆಗಳನ್ನು ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ಕೆಲಸಕ್ಕೆಂದು ಸಂಘಟನೆಯು 40ರಷ್ಟು ವೈದ್ಯರನ್ನು ಗೊತ್ತುಪಡಿಸಿದ್ದು, ಇವರೆಲ್ಲಾ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡಲಿದ್ದಾರೆ.

7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….!

ಮನೆಯಲ್ಲೇ ಐಸೋಲೇಟ್ ಆಗಿರುವ ಕೋವಿಡ್ ಸೋಂಕಿತರಿಗೆ ಆಹಾರ, ವಿಶ್ರಾಂತಿ, ಮದ್ದು ಸೇರಿದಂತೆ ಅಗತ್ಯ ವಿಷಯಗಳ ಕುರಿತಂತೆ ಈ ಅಭಿಯಾನದ ಮೂಲಕ ಸೂಚನೆಗಳನ್ನು ಒದಗಿಸಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಮಂದಿಗೂ ಇದೇ ಸಹಾಯವಾಣಿ ಮೂಲಕ ಅಗತ್ಯ ನೆರವು ನೀಡಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...