alex Certify ʼಕೋವಿಡ್ʼ​ ಸೋಂಕಿತರ ಕುಟುಂಬಕ್ಕೆ ನೆರವಾದ​ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ​ ಸೋಂಕಿತರ ಕುಟುಂಬಕ್ಕೆ ನೆರವಾದ​ ಚಾಲಕ

ದೇಶದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮಿತಿಮೀರಿದೆ. ಸಾಕಷ್ಟು ಸವಾಲುಗಳನ್ನ ವೈದ್ಯಕೀಯ ಲೋಕ ಎದುರಿಸುತ್ತಿರುವ ನಡುವೆಯೇ ಕೆಲ ಮಹಾನುಭಾವರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಿದ್ದಾರೆ.

ಇದೇ ರೀತಿ ಊಬರ್​​ ಚಾಲಕ ಕೂಡ ವೃದ್ಧ ಕೋವಿಡ್​​ ಸೋಂಕಿತೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಿತುಪರ್ಣ ಚಟರ್ಜಿ ಟ್ವಿಟರ್​​ನಲ್ಲಿ ಈ ವಿಚಾರವನ್ನ ಶೇರ್​ ಮಾಡಿದ್ದು ಉದಿತ್​ ಅಗರ್ವಾಲ್​​ ಎಂಬ ಊಬರ್​ ಚಾಲಕ ಹೇಗೆ ತನ್ನ ತಾಯಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು ಎಂಬ ವಿಚಾರವನ್ನ ಹಂಚಿಕೊಂಡಿದ್ದಾರೆ.

ಕೋವಿಡ್​ ಸೋಂಕಿತೆಯಾಗಿದ್ದ ನನ್ನ ತಾಯಿಗೆ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಆಕೆಯ ಆಕ್ಸಿಜನ್​ ಮಟ್ಟ 80ಕ್ಕೆ ಇಳಿಕೆಯಾದ್ದರಿಂದ ನನ್ನ ಸ್ನೇಹಿತರು ಆಸ್ಪತ್ರೆಯೊಂದರಲ್ಲಿ ಬೆಡ್​ ಹುಡುಕಿದ್ದರು. ನಮ್ಮ ಬಳಿ ಕೇವಲ ಒಂದು ಆಕ್ಸಿಜನ್​ ಸಿಲಿಂಡರ್​ ಮಾತ್ರ ಬಾಕಿ ಉಳಿದಿತ್ತು. ಹೀಗಾಗಿ ನಾವು ಆಕೆಯನ್ನ ಆಸ್ಪತ್ರೆಗೆ ಸೇರಿಸಲೇಬೇಕಿತ್ತು.

ಎಷ್ಟು ಪ್ರಯತ್ನಿಸಿದರೂ ನಮಗೆ ಆಂಬುಲೆನ್ಸ್ ಸೇವೆ ದೊರಕಲಿಲ್ಲ. ನನ್ನ ತಾಯಿಯಂತೂ ಬದುಕುವ ಆಸೆಯನ್ನೇ ಬಿಟ್ಟಿದ್ದರು. ಈ ವೇಳೆಗೆ ನಾನು ಊಬರ್​​ನಲ್ಲಿ ಕಾರನ್ನ ಬುಕ್ ಮಾಡಲು ನಿರ್ಧರಿಸಿದೆ. ಸಾಕಷ್ಟು ಪ್ರಯತ್ನಗಳ ಬಳಿಕ ಅರ್ಗವಾಲ್​ ನಮಗೆ ಸಿಕ್ಕಿದ್ರು. ನನಗೆ ಹಾಗೂ ನನ್ನ ತಾಯಿಗೆ ಕೋವಿಡ್​ ಪಾಸಿಟಿವ್​ ಇದೆ ಎಂದು ತಿಳಿದಿದ್ದರೂ ಸಹ 40 ಕಿಮೀ ದೂರದ ಆಸ್ಪತ್ರೆಗೆ ನಮ್ಮನ್ನ ಸುರಕ್ಷಿತವಾಗಿ ತಲುಪಿಸಿದ್ರು.

ಬರೋಬ್ಬರಿ ನಾಲ್ಕು ಗಂಟೆಗಳು ಅಗರ್ವಾಲ್​ ನಮ್ಮ ಜೊತೆಯಲ್ಲೇ ಇದ್ದರು. ನಾನು ಆಸ್ಪತ್ರೆಯ ವಿವಿಧ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ಅವರೇ ನನ್ನ ತಾಯಿಗೆ ನೀರು ತಂದುಕೊಡೋದು ಸೇರಿದಂತೆ ವಿವಿಧ ಆರೈಕೆ ಮಾಡುತ್ತಲೇ ಇದ್ದರು. ಮಾರನೇ ದಿನ ನನ್ನ ತಾಯಿಗೆ ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಆಗುವಾಗಲೂ ಇದೇ ಅಗರ್​ವಾಲ್​ ನಮ್ಮ ಸಹಾಯಕ್ಕೆ ನಿಂತಿದ್ದರು ಎಂದು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಊಬರ್​ ಚಾಲಕನ ಮಾನವೀಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...