alex Certify ʼಕೊರೊನಾʼ ಕುರಿತ ಜಾಗೃತಿಗೆ ಬೆಂಗಳೂರು ಪೊಲೀಸರಿಂದ ಹೊಸ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಕುರಿತ ಜಾಗೃತಿಗೆ ಬೆಂಗಳೂರು ಪೊಲೀಸರಿಂದ ಹೊಸ ಉಪಾಯ

Bengaluru Police is Going Viral on Instagram for Sharing 'Smart ...

ಕಣ್ಣಿಗೆ ಕಾಣದ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು, ಹೊಸದೊಂದು ಆಟ ಶುರು ಮಾಡಿದ್ದಾರೆ. ಇದಕ್ಕಾಗಿ ಲೂಡೊ ಡೈಸ್, ಪದಬಂಧ, ಸಂಚಾರಿ ಸಂಕೇತಗಳನ್ನು ಬಳಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಬಿಎಲ್ಆರ್ ಸಿಟಿ ಪೊಲೀಸ್ ಇನ್ ಸ್ಟಾಗ್ರಾಮ್ ನಲ್ಲಿ ಕೊರೋನಾ ವಿರುದ್ಧ ಅರಿವು ಮೂಡಿಸಲು ಕೆಲವು ಪೋಸ್ಟ್ ಗಳನ್ನು ಮಾಡಿರುವ ಬೆಂಗಳೂರು ಪೊಲೀಸರ ಉಪಾಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ವಿರುದ್ಧದ ಸಮರವನ್ನು ಆಟವೆಂದು ಭಾವಿಸಿ, ಆಟದಲ್ಲಿ ಗೆಲ್ಲಲು ಲೂಡೂ ಡೈಸ್ ನಲ್ಲಿ ಸ್ಯಾನಿಟೈಸರ್, ಮಾಸ್ಕ್, ಸೋಶಿಯಲ್ ಡಿಸ್ಟೆನ್ಸಿಂಗ್ ಎಂಬ ಗೆರ ಬೀಳಬೇಕು ಎನ್ನುವಂತೆ ಸೃಷ್ಟಿಸಲಾಗಿದೆ.

ಕೊರೊನಾ ಪದಬಂಧ ಕಟ್ಟಿರುವ ಪೊಲೀಸರು, ಸೋಂಕಿನಿಂದ ದೂರ ಇರಲು ಯೋಗ ಮಾಡಬೇಕು, ಉತ್ಸಾಹ ಇಟ್ಟುಕೊಳ್ಳಬೇಕು, ಜಾಗಿಂಗ್ ಮಾಡಬೇಕು. ಇದನ್ನೆಲ್ಲ ಮಾಡುವವರ ಹತ್ತಿರಕ್ಕೂ ಕೊರೊನಾ ಸುಳಿಯುವುದಿಲ್ಲ. ಅದೇ ರೀತಿ ಮಕ್ಕಳು, ಯುವಕರು, ಆರೋಗ್ಯವಂತರಿಂದ ಕೊರೊನಾ ದೂರ ಇರಲಿದೆ. ಆದರೆ, ನಗರದ ನಾಗರಿಕರು ಏಕರೂಪದ ರಕ್ಷಾಕವಚ ಹಾಗೂ ಬಾವುಟ ಬಳಸಬೇಕು. ಫೇಸ್ ಶೀಲ್ಡ್ ಮತ್ತು ಮಾಸ್ಕ್ ನ್ನೇ ಏಕರೂಪದ ರಕ್ಷಾಕವಚ, ಬಾವುಟಕ್ಕೆ ಹೋಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...