alex Certify ಬಲವಂತವಾಗಿ ಯುವತಿ ತಬ್ಬಿಕೊಂಡ ಡೆಲಿವರಿ ಬಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತವಾಗಿ ಯುವತಿ ತಬ್ಬಿಕೊಂಡ ಡೆಲಿವರಿ ಬಾಯ್

ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಆರ್ಡರ್ ಮಾಡಿದ ವಸ್ತು ನೀಡಲು ಬಂದಿದ್ದ ಡೆಲಿವರಿ ಬಾಯ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಆರೋಪಿಯನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. 25 ವರ್ಷದ ಯುವತಿ ಆರ್ಡರ್ ಮಾಡಿದ ವಸ್ತುವನ್ನು ನೀಡಲು ಬಂದ ಅರುಣ್ ಕುಮಾರ್ ಅನುಚಿತವಾಗಿ ವರ್ತಿಸಿದ್ದಾನೆ.

ನೆಟ್ವರ್ಕ್ ಪ್ರಾಬ್ಲಮ್ ನಿಂದಾಗಿ ಆನ್ಲೈನ್ ಮೂಲಕ ಹಣ ಪಾವತಿಸಲು ಸಾಧ್ಯವಾಗದ ಕಾರಣ ಯುವತಿ ಹಣ ತರಲು ರೂಮಿಗೆ ಹೊರಟಿದ್ದಾರೆ. ಇದೇ ವೇಳೆ ಅರುಣ್ ಕುಮಾರ್ ಮನೆಯ ಶೌಚಾಲಯ ಬಳಸಬಹುದೇ ಎಂದು ಕೇಳಿದ್ದು ಮಾನವೀಯ ದೃಷ್ಟಿಯಿಂದ ಯುವತಿ ಅನುಮತಿ ನೀಡಿದ್ದಾರೆ.

ಶೌಚಾಲಯದಿಂದ ಹೊರಬಂದ ಅರುಣ್ ಕುಮಾರ್ ಅಸಭ್ಯವಾಗಿ ವರ್ತಿಸಿ ಯುವತಿಯನ್ನು ತಬ್ಬಿಕೊಂಡು ಎಳೆದಾಡಿದ್ದಾನೆ. ಈ ವೇಳೆ ಹಣ ಕೊಡುವುದಿಲ್ಲ ಎಂದು ಹೇಳಿದಾಗ ಹಣ ಕೊಡುವಂತೆ ಪೀಡಿಸಿದ್ದಾನೆ. ಮತ್ತೆ ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ್ದರಿಂದ ಯುವತಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...