alex Certify ಗಂಡನಿಂದ ದೂರವಾದ ನರ್ಸ್ ಜೊತೆ ಸಂಬಂಧ, ವಿಡಿಯೋ ಕಾಲ್ ನಲ್ಲಿ ಬಯಲಾಯ್ತು ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನಿಂದ ದೂರವಾದ ನರ್ಸ್ ಜೊತೆ ಸಂಬಂಧ, ವಿಡಿಯೋ ಕಾಲ್ ನಲ್ಲಿ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ನರ್ಸ್ ಜೊತೆ ದೈಹಿಕ ಸಂಬಂಧ ಬೆಳೆಸಿದ ವ್ಯಕ್ತಿಯೊಬ್ಬ ರಹಸ್ಯವಾಗಿ ಬೇರೆ ಯುವತಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ.

34 ವರ್ಷದ ಮಹಿಳೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಕೌಟುಂಬಿಕ ಕಲಹದ ಕಾರಣದಿಂದ ಗಂಡನಿಂದ ದೂರವಾಗಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಫೇಸ್ಬುಕ್ ಮೂಲಕ ಪರಿಚಿತನಾದ ವ್ಯಕ್ತಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಇಬ್ಬರ ನಡುವೆ ಗೆಳೆತನ ಬೆಳೆದಿದೆ.

ಎರಡು ವರ್ಷಗಳ ಕಾಲ ಸಂಪರ್ಕದಲ್ಲಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿ ಮಹಿಳೆಯನ್ನು ಬೆಂಗಳೂರು ಹಾಗೂ ಬೀದರ್ ವಿವಿಧೆಡೆ ಕರೆದುಕೊಂಡು ಹೋಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಪೋಷಕರಿಗೂ ಮಹಿಳೆಯನ್ನು ಪರಿಚಯ ಮಾಡಿಕೊಟ್ಟಿದ್ದಾನೆ. ಆಕೆಯಿಂದ ಹಣ, ಮೊಬೈಲ್ ಪಡೆದುಕೊಂಡ ಆತ ಲಾಕ್ಡೌನ್ ವೇಳೆಯಲ್ಲಿ ಮೇ 19 ರಂದು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ.

ಹೀಗಿದ್ದರೂ ಮಹಿಳೆಯೊಂದಿಗೆ ಸಂಪರ್ಕ ಮುಂದುವರೆಸಿದ್ದ ವ್ಯಕ್ತಿ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ಈ ವೇಳೆ ಕೈಮೇಲೆ ಮೆಹಂದಿ ಕಾಣಿಸಿದೆ. ಪ್ರಶ್ನಿಸಿದಾಗ ಬೇರೆ ಯುವತಿಯನ್ನು ಮದುವೆಯಾಗಿರುವುದಾಗಿ ತಿಳಿಸಿ, ನನ್ನಿಂದ ದೂರವಾಗು, ಇಲ್ಲದಿದ್ದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...