alex Certify ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 27 ರಿಂದ ಅರ್ಜಿಯನ್ನು http://davanagere.nic.in ಮುಖಾಂತರ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿರುತ್ತದೆ.

ಮೀಸಲಾತಿ ಇತರೆ ಹೊಂದಿರುವ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಪುರ ಅಂಗನವಾಡಿ ಕೇಂದ್ರ(ಎಸ್.ಟಿ), ಕಾಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟಗನಾಳ್-ಎ ಅಂಗನವಾಡಿ ಕೇಂದ್ರ(ಎಸ್.ಸಿ), ಕೊಡಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೇನಹಳ್ಳಿ ಅಂಗನವಾಡಿ ಕೇಂದ್ರ(ಇತರೆ) ಕಡ್ಲೆಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೂರು ಕ್ಯಾಂಪ್ ಅಂಗನವಾಡಿ ಕೇಂದ್ರಗಳಿಗೆ(ಇತರೆ) ಕಾರ್ಯಕರ್ತೆಯರ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಕೊಡಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗನೂರು-ಎ ಅಂಗನವಾಡಿ ಕೇಂದ್ರ,(ಎಸ್.ಟಿ), ಹದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಡಿ ಅಂಗನವಾಡಿ ಕೇಂದ್ರ(ಎಸ್.ಟಿ), ಕಡ್ಲೆಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಪುರ ಅಂಗನವಾಡಿ ಕೇಂದ್ರ(ಎಸ್.ಸಿ), ದಾವಣಗೆರೆ ವಾರ್ಡ್ ನಂ 11ರ ವ್ಯಾಪ್ತಿಯ ಅಮರಪ್ಪನ ತೋಟ-ಎ ಅಂಗನವಾಡಿ ಕೇಂದ್ರ(ಎಸ್.ಸಿ), ನಗರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಾಪುರ ಅಂಗನವಾಡಿ ಕೇಂದ್ರ(ಇತರೆ), ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ವಡ್ಡರಹಳ್ಳಿ ಅಂಗನವಾಡಿ ಕೇಂದ್ರ(ಎಸ್.ಸಿ), ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಮುತ್ತೇನಹಳ್ಳಿ ಅಂಗನವಾಡಿ ಕೇಂದ್ರ(ಇತರೆ), ವಾರ್ಡ್ ನಂ-21ರ ವ್ಯಾಪ್ತಿಯ ಕಬ್ಬೂರು ಬಸಪ್ಪನಗರ-2 ಅಂಗನವಾಡಿ ಕೇಂದ್ರ(ಇತರೆ), ವಾರ್ಡ್ ನಂ-09ರ ವ್ಯಾಪ್ತಿಯ ಮಲ್ಲಾಪುರ ಅಂಗನವಾಡಿ ಕೇಂದ್ರ ಭಾಷಾನಗರ-ಜಿ(ಇತರೆ), ಈ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...