alex Certify ಅಕ್ಕನ ವಿರೋಧದ ನಡುವೆಯೂ 5 ಮದುವೆಯಾದ ಆಂಟಿಯೇ ಬೇಕೆಂದು ಹಠ ಹಿಡಿದು ವರಿಸಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕನ ವಿರೋಧದ ನಡುವೆಯೂ 5 ಮದುವೆಯಾದ ಆಂಟಿಯೇ ಬೇಕೆಂದು ಹಠ ಹಿಡಿದು ವರಿಸಿದ ಯುವಕ

ಚಿಕ್ಕಮಗಳೂರು: 38 ವರ್ಷದ ಮಹಿಳೆ 22 ವರ್ಷದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಆಕೆಗೆ ಆರನೇ ಮದುವೆಯಾಗಿದ್ದು ಯುವಕನಿಗೆ ಮೊದಲ ಮದುವೆಯಾಗಿದೆ.

ಮಹಿಳೆ ಈ ಹಿಂದೆಯೇ ಐದು ಮಂದಿಯನ್ನು ಮದುವೆಯಾಗಿದ್ದಾಳೆ. ತಂದೆ ತಾಯಿ ಇಲ್ಲದ ಯುವಕ ಚಂದ್ರು ಅಕ್ಕನ ಮನೆಯಲ್ಲಿ ಬೆಳೆದಿದ್ದು 2 ಮಕ್ಕಳ ತಾಯಿಯಾಗಿರುವ ಈ ಹಿಂದೆಯೇ ಐದು ಮಂದಿಯನ್ನು ಮದುವೆಯಾಗಿರುವ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ.

ರಂಗೇನಹಳ್ಳಿಯ ಚಂದ್ರು ಮನೆ ಪಕ್ಕದಲ್ಲೇ ಮಹಿಳೆ ವಾಸವಾಗಿದ್ದು 1 ತಿಂಗಳಿನಿಂದ ಪ್ರೀತಿಸಿದ್ದಾರೆ. ಮನೆಯವರ ವಿರೋಧದ ನಡುವೆಯೂ ಚಂದ್ರು ಮದುವೆಯಾಗಿದ್ದಾನೆ. ಯಾರು ಚೆನ್ನ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಕಾರಣ 5 ಮದುವೆಯಾಗಬೇಕಾಯಿತು ಎಂಬುದನ್ನು ಹೇಳಿಕೊಂಡಿರುವ ಮಹಿಳೆ ಇನ್ನು ಮುಂದೆ ಚಂದ್ರ ಜೊತೆಗೆ ಜೀವನ ನಡೆಸುತ್ತೇನೆ. ಇದೇ ತನ್ನ ಕೊನೆಯ ಮದುವೆ. ನಾವಿಬ್ಬರೂ ಚೆನ್ನಾಗಿ ಇರುತ್ತೇನೆ ಎಂದು ಹೇಳಿದ್ದಾರೆ.

ಅಕ್ಕನ ಬುದ್ಧಿಮಾತು ಕೇಳದೆಯೂ ಚಂದ್ರು ಮಹಿಳೆಯನ್ನು ವರಿಸಿದ್ದು ಈ ಹಿಂದೆ ಆಕೆಯನ್ನು ಮದುವೆಯಾದವರು ಮೋಸಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಚಂದ್ರು ಜೊತೆಗೇ ಇರುವುದಾಗಿ ಮಹಿಳೆ ಹೇಳಿರುವುದರಿಂದ ಸ್ಥಳೀಯರು ಅವರ ಮದುವೆಗೆ ಶುಭಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...