alex Certify SHOCKING: ಕರ್ನಾಟಕ ರಾಜ್ಯವೊಂದರಲ್ಲೇ ಇವೆ ಇಷ್ಟೊಂದು ಗುಜರಿ ವಾಹನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕರ್ನಾಟಕ ರಾಜ್ಯವೊಂದರಲ್ಲೇ ಇವೆ ಇಷ್ಟೊಂದು ಗುಜರಿ ವಾಹನಗಳು

ಬೆಂಗಳೂರಿನ 22 ಲಕ್ಷ ವಾಹನಗಳು ಸೇರಿದಂತೆ ರಾಜ್ಯದ 63 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಿಂದಿನವು ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಬಜೆಟ್​ ಮಂಡನೆ ಮಾಡುವ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಹಳೆ ವಾಹನಗಳನ್ನ ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವ ನೀತಿಯನ್ನ ಜಾರಿಗೆ ತರೋದಾಗಿ ಹೇಳಿದ್ರು.

ಈ ಮೂಲಕ ಮಾಲಿನ್ಯ ನಿಯಂತ್ರಣ ಹಾಗೂ ಆಟೋ ಮೊಬೈಲ್​ ಕ್ಷೇತ್ರದಲ್ಲಿ ಅಭಿವೃದ್ಧಿ ತರಲು ಕೇಂದ್ರ ಸರ್ಕಾರ ಪ್ಲಾನ್​ ಮಾಡಿದೆ.

ಕಳೆದ ವರ್ಷದ ಮಾರ್ಚ್​ ತಿಂಗಳವರೆಗೆ 40.2 ಲಕ್ಷ ದ್ವಿಚಕ್ರ ವಾಹನ, 11 ಲಕ್ಷ ಕಾರು, 2.2 ಲಕ್ಷ ಟ್ರಕ್​ / ಲಾರಿಗಳು ಹಾಗೂ 2.6 ಆಟೋ ರಿಕ್ಷಾಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಕೇವಲ ಬೆಂಗಳೂರು ಒಂದರಲ್ಲೇ 12.5 ಲಕ್ಷ ದ್ವಿಚಕ್ರ ವಾಹನಗಳು 15 ವರ್ಷ ಹಳೆಯದಾಗಿವೆ. 5.3 ಲಕ್ಷ ಕಾರುಗಳು, 1.2 ಲಕ್ಷ ಆಟೋಗಳು ಗುಜರಿ ಸಾಲಿಗೆ ಸೇರಿವೆ.

20 ವರ್ಷ ಹಳೆಯದಾದ ವೈಯಕ್ತಿಕ ವಾಹನ ಹಾಗೂ 15 ವರ್ಷ ಹಳೆಯದಾದ ವಾಣಿಜ್ಯ ಬಳಕೆ ವಾಹನಗಳನ್ನ ಸ್ಕ್ರಾಪಿಂಗ್​​ ಪಾಲಿಸಿ ಅಡಿಯಲ್ಲಿ ಗುಜರಿ ಸಾಲಿಗೆ ಸೇರಿಸಲಾಗುವುದು ಎಂದು ಕೇಂದ್ರ ಬಜೆಟ್​ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...