alex Certify 4 ಲಕ್ಷ ರೂ. ಖೋಟಾ ನೋಟು ಸಾಗಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಲಕ್ಷ ರೂ. ಖೋಟಾ ನೋಟು ಸಾಗಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಕಲಬುರಗಿ: 4 ಲಕ್ಷ ರೂಪಾಯಿಗೂ ಹೆಚ್ಚು ಖೋಟಾ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಲಬುರಗಿಯ ಡಿಸಿಐಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತನನ್ನು ಸೇಡಂ ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದೀನ್ ಎಂದು ಗುರುತಿಸಲಾಗಿದೆ. ಬ್ಯಾಗ್ ನಲ್ಲಿ ಕಂತೆಗಟ್ಟಲೇ ಖೋಟಾ ನೋಟುಗಳನ್ನಿಟ್ಟುಕೊಂಡು ಚಿಂಚೋಳಿ ಮಾರ್ಗವಾಗಿ ಬೈಕ್ ನಲ್ಲಿ ಆರೋಪಿ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಪರಿಶೀಲಿಸಿದ್ದಾರೆ.

ಬಂಧಿತನ ಬಳಿಯಿದ್ದ 500, 200 ಹಾಗೂ 100 ರೂ. ಮುಖಬೆಲೆಯ 4.22 ಲಕ್ಷ ರೂಪಾಯಿ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...