alex Certify 3 ರೂ. ಹಿಂದಿರುಗಿಸಲು 30 ರೂ. ಖರ್ಚು ಮಾಡಿದ ಶಿಕ್ಷಣ ಇಲಾಖೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ರೂ. ಹಿಂದಿರುಗಿಸಲು 30 ರೂ. ಖರ್ಚು ಮಾಡಿದ ಶಿಕ್ಷಣ ಇಲಾಖೆ…!

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರೊಬ್ಬರಿಗೆ ಇದಕ್ಕಾಗಿ ಹೆಚ್ಚುವರಿಯಾಗಿ ಪಾವತಿಸಿದ್ದ ಮೂರು ರೂಪಾಯಿ ಹಿಂದಿರುಗಿಸಲು ಪುತ್ತೂರಿನ ಶಿಕ್ಷಣ ಇಲಾಖೆ 30 ರೂ. ಖರ್ಚು ಮಾಡಿರುವ ಘಟನೆ ನಡೆದಿದೆ.

ಕುಂಬ್ರದ ಶಿವಪ್ಪ ರಾಥೋಡ್ ಎಂಬವರು ಮಾಹಿತಿಯೊಂದನ್ನು ಕೋರಿ ಅರ್ಜಿ ಸಲ್ಲಿಸಿದ್ದು, ಇದಕ್ಕಾಗಿ 62 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಅವರು 65 ರೂಪಾಯಿ ಪಾವತಿಸಿದ್ದರು.

ಶಿವಪ್ಪ ರಾಥೋಡ್ ಹೆಚ್ಚುವರಿಯಾಗಿ ಪಾವತಿಸಿದ್ದ 3 ರೂಪಾಯಿಯನ್ನು ಶಿಕ್ಷಣ ಇಲಾಖೆ ಹಿಂದಿರುಗಿಸಿರಲಿಲ್ಲ. ಆಗ ಪತ್ರವೊಂದನ್ನು ಬರೆದ ಶಿವಪ್ಪ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಪುತ್ತೂರಿನ ಶಿಕ್ಷಣ ಇಲಾಖೆ ಒಂದು ರೂಪಾಯಿಯ ಮೂರು ನಾಣ್ಯಗಳನ್ನು ಲಕೋಟೆಗೆ ತುಂಬಿಸಿ ಅದನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಶಿವಪ್ಪ ರಾಥೋಡ್ ಅವರಿಗೆ ಕಳುಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...